alex Certify
ಕನ್ನಡ ದುನಿಯಾ       Mobile App
       

Kannada Duniya

ಸಾಧಕರ ಪೋಸ್ಟರ್ ನಲ್ಲಿ ಮದರ್ ತೆರೇಸಾ ಜೊತೆ ಜಿಹಾದಿ ಮಹಿಳೆ

ಜಮ್ಮು-ಕಾಶ್ಮೀರದ ಸಮಾಜ ಕಲ್ಯಾಣ ಸಚಿವಾಲಯ, ಮೆಹಬೂಬ ಮುಫ್ತಿ ಸರ್ಕಾರ ತಲೆ ತಗ್ಗಿಸುವ ಕೆಲಸ ಮಾಡಿದೆ. ಅನಂತನಾಗ್ ಜಿಲ್ಲೆಯ ಅಧಿಕಾರಿಗಳ ಕಚೇರಿ ಮುಂದೆ ಹಾಕಲಾಗಿರುವ ಪೋಸ್ಟರ್ ಒಂದು ವಿವಾದಕ್ಕೆ ಕಾರಣವಾಗಿದೆ. ಕಾಶ್ಮೀರದ ಪ್ರತ್ಯೇಕತಾವಾದಿ ಆಶಿಯಾಗೆ ಇಂದಿರಾ ಗಾಂಧಿ, ಮದರ್ ತೆರೇಸಾಗೆ ನೀಡಿದ ಗೌರವನ್ನು ನೀಡಲಾಗಿದೆ.

ಬೇಟಿ ಬಚಾವೂ ಬೇಟಿ ಪಡಾವೋ ಪೋಸ್ಟರ್ ಒಂದನ್ನು ಅಧಿಕಾರಿಗಳ ಕಚೇರಿ ಮುಂದೆ ಹಾಕಲಾಗಿದೆ. ಈ ಪೋಸ್ಟರ್ ನಲ್ಲಿ ಸಾಧನೆ ಮಾಡಿದ ಮಹಿಳೆಯರಿದ್ದಾರೆ. ಆದ್ರೆ ಇಂದಿರಾಗಾಂಧಿ, ಮದರ್ ತೆರೇಸಾರಿರುವ ಈ ಪೋಸ್ಟರ್ ನಲ್ಲಿ ದುಖ್ತರಾನ್-ಎ-ಮಿಲ್ಲತ್ ಸಂಘಟನೆ ಸಂಸ್ಥಾಪಕಿ ಆಶಿಯಾಗೂ ಸ್ಥಾನ ನೀಡಲಾಗಿದೆ.

ಈ ಪೋಸ್ಟರ್ ನಲ್ಲಿ ಕಿರಣ್ ಬೇಡಿ, ಲತಾ ಮಂಗೇಶ್ಕರ್, ಸಾನಿಯಾ ಮಿರ್ಜಾ, ಮೆಹಬೂಬಾ ಮುಫ್ತಿ ಹಾಗೂ ಕಲ್ಪನಾ ಚಾವ್ಲಾ ಸೇರಿದಂತೆ ಸಾಧನೆ ಮಾಡಿದ ಮಹಿಳೆಯರಿದ್ದಾರೆ. ಜನರಿಗೆ ಪ್ರೇರಣೆಯಾಗಬೇಕಿದ್ದ ಈ ಪೋಸ್ಟರ್ ನಲ್ಲಿ ಭಯೋತ್ಪಾದನಾ ಸಂಘಟನೆ ಜೊತೆ ಕೈಜೋಡಿಸಿರುವ ಮಹಿಳೆ ಫೋಟೋ ಇರುವುದು ಎಲ್ಲರ ಆಕ್ರೋಶಕ್ಕೆ ಕಾರಣವಾಗಿದೆ.

ಕಾರ್ಯಕ್ರಮವೊಂದರ ಹಿನ್ನೆಲೆಯಲ್ಲಿ ಈ ಪೋಸ್ಟರ್ ಹಾಕಲಾಗಿತ್ತು. ವಿಶೇಷವೆಂದ್ರೆ ಈ ಕಾರ್ಯಕ್ರಮದಲ್ಲಿ ಮೆಹಬೂಬ ಮುಫ್ತಿ ಸಹೋದರ ಕೂಡ ಹಾಜರಾಗಿದ್ದರು.

 

Subscribe Newsletter

Get latest updates on your inbox...

Opinion Poll

  • ಕಪ್ಪು ಹಣಕ್ಕೆ ಕಡಿವಾಣ ಹಾಕುವ ಕೇಂದ್ರ ಸರ್ಕಾರದ ಪ್ರಯತ್ನ ವಿಫಲವಾಗಿದೆಯೇ..?

    View Results

    Loading ... Loading ...