alex Certify
ಕನ್ನಡ ದುನಿಯಾ       Mobile App
       

Kannada Duniya

ಕಾಂಗ್ರೆಸ್ ಗೆ ಬಿಗ್ ಶಾಕ್! ಬಿ.ಜೆ.ಪಿ.ಯತ್ತ 8 ಶಾಸಕರು

ಶಿಲ್ಲಾಂಗ್: ಮೇಘಾಲಯದಲ್ಲಿ ಆಡಳಿತಾರೂಢ ಕಾಂಗ್ರೆಸ್ ಗೆ ದೊಡ್ಡ ಪೆಟ್ಟು ಬಿದ್ದಿದೆ. ಕಾಂಗ್ರೆಸ್ ನ 5 ಮಂದಿ ಸೇರಿದಂತೆ 8 ಶಾಸಕರು ಬಿ.ಜೆ.ಪಿ. ಮೈತ್ರಿಕೂಟ ಸೇರಲು ಸಜ್ಜಾಗಿದ್ದಾರೆ.

ಜನವರಿ 4 ರಂದು ಶಿಲ್ಲಾಂಗ್ ನಲ್ಲಿ ನಡೆಯಲಿರುವ ರ್ಯಾಲಿಯಲ್ಲಿ 8 ಶಾಸಕರು, ಬಿ.ಜೆ.ಪಿ. ನೇತೃತ್ವದ ಎನ್.ಡಿ.ಎ. ಮೈತ್ರಿಕೂಟದ ಪಕ್ಷವಾಗಿರುವ ನ್ಯಾಷನಲ್ ಪೀಪಲ್ಸ್ ಪಾರ್ಟಿಗೆ ಸೇರಲಿದ್ದಾರೆ.

ಮುಕುಲ್ ಸಂಗ್ಮಾ ನೇತೃತ್ವದ ಸರ್ಕಾರಕ್ಕೆ ಹಿನ್ನಡೆಯಾಗಿದೆ. 60 ಸದಸ್ಯ ಬಲದ ಮೇಘಾಲಯ ವಿಧಾನಸಭೆಯಲ್ಲಿ ಕಾಂಗ್ರೆಸ್ ಶಾಸಕರ ಸಂಖ್ಯೆ 29 ರಿಂದ 24 ಕ್ಕೆ ಇಳಿದಿದೆ. ಆದರೂ ಪಕ್ಷೇತರರು ಮತ್ತು ಇತರರ ಬೆಂಬಲ ಇರುವುದರಿಂದ ಸರ್ಕಾರಕ್ಕೆ ಸದ್ಯಕ್ಕೆ ಯಾವುದೇ ಭಂಗವಿಲ್ಲ.

ಶುಕ್ರವಾರ ಸ್ಪೀಕರ್ ಭೇಟಿ ಮಾಡಿದ 8 ಮಂದಿ ಶಾಸಕರು ತಮ್ಮ ರಾಜೀನಾಮೆ ಸಲ್ಲಿಸಿದ್ದಾರೆ. ಇದರಲ್ಲಿ ಐವರು ಕಾಂಗ್ರೆಸ್, ಇಬ್ಬರು ಪಕ್ಷೇತರರು ಹಾಗೂ ಒಬ್ಬರು ಯು.ಡಿ.ಪಿ. ಶಾಸಕರಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...