alex Certify
ಕನ್ನಡ ದುನಿಯಾ       Mobile App
       

Kannada Duniya

ಲೈಂಗಿಕ ಕಿರುಕುಳ : ರಾಜ್ಯಪಾಲ ದಿಢೀರ್ ರಾಜೀನಾಮೆ

v-sha

ಶಿಲ್ಲಾಂಗ್: ರಾಜಭವನವನ್ನು ಲೇಡಿಸ್ ಕ್ಲಬ್ ಆಗಿ ಪರಿವರ್ತನೆ ಮಾಡಿಕೊಂಡ ಆರೋಪ ಹೊತ್ತಿದ್ದ, ಮೇಘಾಲಯ ರಾಜ್ಯಪಾಲ ವಿ. ಷಣ್ಮುಗನಾಥನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ರಾಜಭವನದಲ್ಲಿ ಪುರುಷ ಸಿಬ್ಬಂದಿಗಳನ್ನೆಲ್ಲಾ ವರ್ಗಾವಣೆ ಮಾಡಿದ್ದ ಅವರು, ಮಹಿಳೆಯರನ್ನು ಮಾತ್ರ ಕೆಲಸಕ್ಕೆ ನಿಯೋಜಿಸಿಕೊಂಡಿದ್ದರು.

ಅಡುಗೆ ಕೆಲಸ, ನರ್ಸ್, ಸಾರ್ವಜನಿಕ ಸಂಪರ್ಕಾಧಿಕಾರಿ ಸೇರಿದಂತೆ ತಮ್ಮ ವೈಯಕ್ತಿಕ ಹಾಗೂ ಕಚೇರಿ ಕೆಲಸಗಳಿಗೆ ಹೆಣ್ಣು ಮಕ್ಕಳಿಗೆ ಮಾತ್ರ ಆದ್ಯತೆ ನೀಡಿದ್ದರು. ಅಲ್ಲದೇ, ಸಂದರ್ಶನಕ್ಕೆ ಬಂದಿದ್ದ ಮಹಿಳೆಯೊಬ್ಬರ ಜೊತೆಗೆ ಅನುಚಿತವಾಗಿ ವರ್ತಿಸಿದ್ದರೆನ್ನಲಾಗಿದೆ.

ರಾಜ್ಯಪಾಲರು ರಾಜಭವನವನ್ನು ಲೇಡಿಸ್ ಕ್ಲಬ್ ಆಗಿ ಪರಿವರ್ತನೆ ಮಾಡಿಕೊಂಡಿರುವ ಬಗ್ಗೆ ರಾಜಭವನದ 100 ಕ್ಕೂ ಅಧಿಕ ಸಿಬ್ಬಂದಿ ರಾಷ್ಟ್ರಪತಿ, ಪ್ರಧಾನಿ ಹಾಗೂ ಗೃಹಸಚಿವರಿಗೆ ಪತ್ರ ಬರೆದಿದ್ದರು.

ಕೂಡಲೇ ಅವರನ್ನು ಬದಲಿಸುವಂತೆ ಬೇಡಿಕೆ ಇಟ್ಟಿದ್ದರು. ಈ ವಿಷಯ ಬಹಿರಂಗವಾಗಿದ್ದರಿಂದ ಷಣ್ಮುಗನಾಥನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...