alex Certify
ಕನ್ನಡ ದುನಿಯಾ       Mobile App
       

Kannada Duniya

ಮಹಾರಾಷ್ಟ್ರ ರೈತರ ಬೃಹತ್ ಪ್ರತಿಭಟನೆ ಯಶಸ್ಸಿನ ಹಿಂದಿದ್ದಾರೆ ಈ ವ್ಯಕ್ತಿ

ವಿಜೂ ಕೃಷ್ಣನ್ ಒಬ್ಬ ರೈತ ಕಾರ್ಯಕರ್ತ. ಮಹಾರಾಷ್ಟ್ರದ 55,000 ರೈತರು ಕಾಲ್ನಡಿಗೆ ಮೂಲಕ 182 ಕಿಮೀ ದೂರದ ಮುಂಬೈಗೆ ಆಗಮಿಸಿ ಶಾಂತಿಯುತ ಪ್ರತಿಭಟನೆ ನಡೆಸಲು ಕಾರಣವಾದವರು ವಿಜೂ ಕೃಷ್ಣನ್.

ರೈತರಿಗೆ ದೇಶದಲ್ಲಿ ಎಷ್ಟು ಮಹತ್ವವಿದೆ ಜೊತೆಗೆ ಸರ್ಕಾರ ಸುಲಭವಾಗಿ ರೈತರನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ ಅನ್ನೋದಕ್ಕೆ ಈ ಪ್ರತಿಭಟನೆಯೇ ಸಾಕ್ಷಿ. 44 ವರ್ಷದ ವಿಜೂ ಕೃಷ್ಣನ್, ಜೆ ಎನ್ ಯು ವಿದ್ಯಾರ್ಥಿ ಸಂಘಟನೆಯ ಮಾಜಿ ಅಧ್ಯಕ್ಷ.

ಎಸ್ ಎಫ್ ಐ ಸಂಘಟನೆಯನ್ನೂ ಮುನ್ನಡೆಸಿದ್ದರು. ಈಗ ಆಲ್ ಇಂಡಿಯಾ ಕಿಸಾನ್ ಸಭಾದ ಜಂಟಿ ಕಾರ್ಯದರ್ಶಿಯಾಗಿದ್ದಾರೆ. ದೇಶದ ಅತಿ ದೊಡ್ಡ ರೈತ ಸಂಘಟನೆ ಇದು. ಆಲ್ ಇಂಡಿಯಾ ಕಿಸಾನ್ ಸಭಾ ಸದಸ್ಯರು ನಾಸಿಕ್ ನಿಂದ ಮುಂಬೈಗೆ ಪಾದಯಾತ್ರೆ ಮಾಡಿದ್ದಾರೆ.

ಕೇವಲ ಮಹಾರಾಷ್ಟ್ರ ಮಾತ್ರವಲ್ಲ, ಕರ್ನಾಟಕ, ರಾಜಸ್ತಾನ ಮತ್ತು ಮಧ್ಯಪ್ರದೇಶದ ರೈತರು ಕೂಡ ಇದೇ ರೀತಿ ಸಂಕಷ್ಟದಲ್ಲಿದ್ದಾರೆ ಅನ್ನೋದು ವಿಜೂ ಕೃಷ್ಣನ್ ಅಭಿಪ್ರಾಯ. 50,000 ರೈತರನ್ನು ಒಗ್ಗೂಡಿಸಿದ ಹೆಗ್ಗಳಿಕೆ ಇವರದ್ದು. ಶಿಕ್ಷಕ ವೃತ್ತಿಯನ್ನೇ ತೊರೆದು ರೈತರ ಕ್ಷೇಮಕ್ಕಾಗಿ ಸಂಘಟನೆಯಲ್ಲಿ ತೊಡಗಿಕೊಂಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...