alex Certify
ಕನ್ನಡ ದುನಿಯಾ       Mobile App
       

Kannada Duniya

ತೆರೆಮರೆಗೆ ಸರಿಯಲಿದೆ ದೂರದರ್ಶನದ ಲೋಗೋ

dd-new

70ರ ದಶಕದಲ್ಲಿ ಪ್ರತಿ ಮನೆಯಲ್ಲೂ ಮನರಂಜನೆಯನ್ನು ಉಣಬಡಿಸ್ತಾ ಇದ್ದ ಏಕೈಕ ವಾಹಿನಿ ದೂರದರ್ಶನ. ಎಲ್ಲರ ನೆಚ್ಚಿನ ದೂರದರ್ಶನ ಲೋಗೋ ಈಗ ನಿವೃತ್ತಿ ಪಡೆಯುತ್ತಿದೆ. ಈ ಲೋಗೋ ಸೃಷ್ಟಿಕರ್ತರು ಯಾರು ಗೊತ್ತಾ? ನ್ಯಾಶನಲ್ ಇನ್ ಸ್ಟಿಟ್ಯೂಟ್ ಆಫ್ ಡಿಸೈನ್ ನ ಮಾಜಿ ವಿದ್ಯಾರ್ಥಿ ದೇವಾಶಿಸ್ ಭಟ್ಟಾಚಾರ್ಯ.

dd-logo-debashish_8cca2ffe-79b3-11e7-b40f-35ec362abc1c

ಭಟ್ಟಾಚಾರ್ಯ ಸೇರಿದಂತೆ ಗ್ರಾಫಿಕ್ ಡಿಸೈನಿಂಗ್ ನ ಒಟ್ಟು 8 ವಿದ್ಯಾರ್ಥಿಗಳು ಅಹಮದಾಬಾದ್ ನಲ್ಲಿ ಸರ್ಕಾರದ ಈ ಪ್ರಾಜೆಕ್ಟ್ ಕೆಲಸ ಆರಂಭಿಸಿದ್ರು. ಆಗ ದೇಶದ ಮೊದಲ ಸರ್ಕಾರಿ ವಾಹಿನಿ ದೂರದರ್ಶನಕ್ಕೆ ಹೊಸ ಲೋಗೋ ಸೃಷ್ಟಿಸಲಾಯ್ತು. ಒಟ್ಟು 14 ವಿನ್ಯಾಸದ ಲೋಗೋಗಳನ್ನು ಸರ್ಕಾರದ ಮುಂದಿಡಲಾಗಿತ್ತು.

ಅವುಗಳಲ್ಲಿ ಪ್ರಧಾನಿ ಇಂದಿರಾ ಗಾಂಧಿ ದೂರದರ್ಶನಕ್ಕೆ ಈ ಲೋಗೋವನ್ನು ಆಯ್ಕೆ ಮಾಡಿಕೊಂಡ್ರು. ಇಂದಿನವರೆಗೂ ಭಟ್ಟಾಚಾರ್ಯ ಮತ್ತವರ ಸ್ನೇಹಿತರು ಜೊತೆಯಾಗಿ ಅಭಿವೃದ್ಧಿಪಡಿಸಿದ ದೂರದರ್ಶನದ ಲೋಗೋ ಮನೆಮಾತಾಗಿದೆ. ಪಂಡಿತ್ ರವಿಶಂಕರ್ ದೂರದರ್ಶನ ವಾಹಿನಿಗೆ ಸಂಗೀತ ಸಂಯೋಜನೆ ಮಾಡಿದ್ರು.

1976ರ ಎಪ್ರಿಲ್ 1ರಂದು ಮೊಟ್ಟಮೊದಲ ಬಾರಿಗೆ ದೂರದರ್ಶನದಲ್ಲಿ ಮಾಂಟೇಜ್ ಹಾಗೂ ಮ್ಯೂಸಿಕ್ ಪ್ರಸಾರ ಮಾಡಲಾಯ್ತು. 80-90ರ ದಶಕದಲ್ಲಿ ಡಿಡಿ ಲೋಗೋವನ್ನು ಕೊಂಚ ಬದಲಾವಣೆ ಮಾಡಲಾಗಿದೆ. ಭಾರತದ ವಿಶಿಷ್ಟ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಲೋಗೋ ಪ್ರತಿನಿಧಿಸುತ್ತದೆ ಎನ್ನುತ್ತಾರೆ ಭಟ್ಟಾಚಾರ್ಯ. ಆದ್ರೀಗ ದೂರದರ್ಶನದ ಲೋಗೋ ಬದಲಾಯಿಸಲು ಹೊರಟಿರುವುದು ವೀಕ್ಷಕರಿಗೆ ಬೇಸರ ತಂದಿದೆ. ಹಳೆ ಲೋಗೋಗಿದ್ದ ಘನತೆಯನ್ನು ಹೊಸದರಲ್ಲಿ ಕಾಣಬಹುದಾ ಅನ್ನೋದು ಪ್ರೇಕ್ಷಕರ ಪ್ರಶ್ನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...