alex Certify
ಕನ್ನಡ ದುನಿಯಾ       Mobile App
       

Kannada Duniya

ಇವರೇ ನೋಡಿ ಮುಂಬೈನ ‘ಲೇಡಿ ಸಿಂಗಂ’

sangita duby 700_1454477945

ಸಂಗೀತಾ ದುಬೆ ಈ ಹೆಸರು ಈಗ ಮುಂಬೈ ಲೋಕಲ್ ರೈಲಿನಲ್ಲಿ ಪ್ರಯಾಣ ಮಾಡುವ ಮಹಿಳಾ ಪ್ರಯಾಣಿಕರಿಗೆ ಚಿರಪರಿಚಿತವಾಗಿದೆ. ಸಂಗೀತಾ ದುಬೆ ರೈಲಿನಲ್ಲಿದ್ದ ವೇಳೆ ತಾವು ಸುರಕ್ಷಿತಾಗಿರುತ್ತೇವೆಂಬ ಭಾವ ಆ ಮಹಿಳೆಯರಲ್ಲಿ ಮೂಡಿದೆ.

ಇದಕ್ಕೆ ಕಾರಣ ರೈಲಿನಲ್ಲಿ ಮಹಿಳೆಯರಿಗೆ ಕಿರುಕುಳ ನೀಡುವ ಫಟಿಂಗರಿಗೆ ಸಂಗೀತಾ ದುಬೆಯವರು ನೀಡಿದ ಶಿಕ್ಷೆ. ಇದಕ್ಕೆ ನಿದರ್ಶನವೆಂಬಂತೆ ಇತ್ತೀಚೆಗೆ ನಡೆದ ಪ್ರಕರಣವೊಂದರಲ್ಲಿ ತಾವು ಗಾಯಗೊಂಡರೂ ಲೆಕ್ಕಿಸದೆ ಸಂಗೀತಾ ದುಬೆ ಕಾಮುಕನೊಬ್ಬನನ್ನು ಹಿಡಿದು ಜೈಲಿಗಟ್ಟಿದ್ದಾರೆ.

ರೈಲ್ವೇ ಪೊಲೀಸ್ ಅಧಿಕಾರಿಯಾಗಿರುವ ಸಂಗೀತಾ ದುಬೆ, ದಹೌನದಿಂದ ಚರ್ಚ್ ಗೇಟ್ ಗೆ ಹೋಗಲು ಸೆಕೆಂಡ್ ಕ್ಲಾಸ್ ಕಂಪಾರ್ಟ್ಮೆಂಟ್ ನಲ್ಲಿದ್ದರು. ಈ ಸಂದರ್ಭದಲ್ಲಿ ಫಸ್ಟ್ ಕ್ಲಾಸ್ ಕಂಪಾರ್ಟ್ಮೆಂಟ್ ನಲ್ಲಿ ಡ್ರಗ್ ಅಡಿಕ್ಟ್ ಒಬ್ಬ ಅಲ್ಲಿದ್ದ ಮೂವರು ಮಹಿಳೆಯರಿಗೆ ಕಿರುಕುಳ ನೀಡುತ್ತಿದ್ದ ದೃಶ್ಯ ಅವರ ಕಣ್ಣಿಗೆ ಬಿದ್ದಿದೆ. ಆದರೆ ಫಸ್ಟ್ ಕ್ಲಾಸ್ ಕಂಪಾರ್ಟ್ಮೆಂಟ್ ಗೆ ಹೋಗಲು ಪಾರ್ಟಿಶನ್ ಅಡ್ಡವಾಗಿದೆ.

ತಮ್ಮ ಕಣ್ಣೆದುರೇ ಆ ಕಾಮುಕ, ಮಹಿಳೆಯೊಬ್ಬರ ಸೀರೆ ಸೆಳೆಯಲು ಯತ್ನಿಸುತ್ತಿದ್ದುದನ್ನು ಕಂಡ ಸಂಗೀತಾ ದುಬೆ, ಪಾರ್ಟಿಶನ್ ನಡುವೆ ಇದ್ದ ಸಣ್ಣ ಕಿಂಡಿಯಲ್ಲಿ ಕೈಹಾಕಿ ಆತನ ಕೊರಳ ಪಟ್ಟಿ ಹಿಡಿದಿದ್ದಾರೆ. ಆಗ ಧೈರ್ಯ ತಂದುಕೊಂಡ ಮಹಿಳೆಯರೂ ಆತ ತಪ್ಪಿಸಿಕೊಳ್ಳದಂತೆ ನೋಡಿಕೊಂಡಿದ್ದಾರೆ. ನಿಲ್ದಾಣ ಬರುತ್ತಿದ್ದಂತೆಯೇ ಸಂಗೀತಾ ದುಬೆ ಆ ಕಾಮುಕನನ್ನು ಒದ್ದು ಒಳಗೆ ಹಾಕಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...