alex Certify
ಕನ್ನಡ ದುನಿಯಾ       Mobile App
       

Kannada Duniya

ಐದೂವರೆ ಕೋಟಿ ರೂ. ಮೌಲ್ಯದ ಕಾರಿಗೆ ಒಡತಿಯಾಗಲಿದ್ದಾರೆ ಈ ಮಹಿಳೆ

ಐಷಾರಾಮಿ ಕಾರುಗಳ ತಯಾರಿಕಾ ಕಂಪನಿ ರೋಲ್ಸ್ ರಾಯ್ಸ್, ಈಗ ಮಾರುಕಟ್ಟೆಗೆ ಎಸ್.ಯು.ವಿ. ಪರಿಚಯಿಸಲು ಮುಂದಾಗಿದ್ದು, ಈಗಾಗಲೇ ಇದರ ಬುಕ್ಕಿಂಗ್ ಆರಂಭವಾಗಿದೆ. ಎಸ್.ಯು.ವಿ. ತಯಾರಿಕೆಯೂ ಆರಂಭವಾಗಿದ್ದು, ಈ ವರ್ಷಾಂತ್ಯದಲ್ಲಿ ರಸ್ತೆಗಿಳಿಯುವ ಸಾಧ್ಯತೆ ಇದೆ.

ಭಾರತದಲ್ಲಿ ಅಭಿನಿ ಸೋಹನ್ ಎಂಬ ಮಹಿಳೆ ರೋಲ್ಸ್ ರಾಯ್ಸ್ ಎಸ್.ಯು.ವಿ. ಯ ಮೊದಲ ಒಡತಿಯಾಗಲಿದ್ದಾರೆ. ದುಬೈನಲ್ಲಿನ ಏರೀಸ್ ಗ್ರೂಪ್ ಸಂಸ್ಥಾಪಕರಾಗಿರುವ ಸೋಹನ್ ರಾಯ್ ತಮ್ಮ ವಿವಾಹ ವಾರ್ಷಿಕೋತ್ಸವ ಸಂದರ್ಭದಲ್ಲಿ ಪತ್ನಿಗೆ ಇದನ್ನು ಉಡುಗೊರೆಯಾಗಿ ನೀಡುತ್ತಿದ್ದಾರೆ.

ಕುಲಿನನ್ ಹೆಸರಿನ ಈ ಎಸ್.ಯು.ವಿ. ಬೆಲೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ 2.2 ಕೋಟಿ ರೂಪಾಯಿಗಳಾಗಿದ್ದು, ಭಾರತಕ್ಕೆ ತರುವ ವೇಳೆ ತೆರಿಗೆ ಇತ್ಯಾದಿ ಸೇರಿ 5.50 ಕೋಟಿ ರೂ. ತಗುಲಲಿದೆ. ಸೋಹನ್ ರಾಯ್ ಇದನ್ನು ಈಗಾಗಲೇ ಬುಕ್ ಮಾಡಿದ್ದು, ಡಿಸೆಂಬರ್ ಒಳಗೆ ಸಿಗುವ ನಿರೀಕ್ಷೆ ಹೊಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...