alex Certify
ಕನ್ನಡ ದುನಿಯಾ       Mobile App
       

Kannada Duniya

ಮೂವರು ಹೆಂಡಿರ ಮುದ್ದಿನ ಗಂಡ ಈ ಶ್ರೀಮಂತ ಭಿಕ್ಷುಕ

ರೈಲು ಪ್ರಯಾಣದ ವೇಳೆ ಅಥವಾ ಟ್ರಾಫಿಕ್ ನಲ್ಲಿ ವಾಹನ ನಿಲ್ಲಿಸಿಕೊಂಡಾಗ ಭಿಕ್ಷುಕರು ಹಣ ಯಾಚಿಸುತ್ತಾರೆ. ಅಂತಹ ಭಿಕ್ಷುಕರು ಕೆಲಸ ಮಾಡಲಾಗದ ಅಸಹಾಯಕರಂತೆ ಕಂಡರೆ ಕೆಲವರು ಹಣ ನೀಡುತ್ತಾರೆ. ಮತ್ತೆ ಹಲವರು ನಿರ್ಲಕ್ಷಿಸುತ್ತಾರೆ.

ಆದರೆ ಜಾರ್ಖಂಡ್ ನ ಚಕ್ರಧರ್ ಪುರ್ ರೈಲು ನಿಲ್ದಾಣದಲ್ಲಿ ಭಿಕ್ಷೆ ಬೇಡುವ 40 ವರ್ಷದ ಚೋಟು ಬೈರೇಕ್ ಸ್ವಲ್ಪ ಡಿಫರೆಂಟ್. ವಿಕಲಚೇತನನಾಗಿರುವ ಈತ ರೈಲಿನಲ್ಲಿ ಭಿಕ್ಷೆ ಬೇಡುವ ಮೂಲಕ ತಿಂಗಳಿಗೆ 30 ಸಾವಿರ ರೂ. ಗಳಿಸುತ್ತಾನೆ.

ಅಷ್ಟೇ ಅಲ್ಲ ಸಂಸ್ಥೆಯೊಂದರ ವಿತರಕನಾಗಿಯೂ ಈತ ಕೆಲಸ ಮಾಡುತ್ತಿದ್ದು, ಅದರಿಂದಲೂ ಸಾಕಷ್ಟು ಹಣ ಗಳಿಸುತ್ತಾನೆ. ಮೂವರು ಪತ್ನಿಯರನ್ನು ಹೊಂದಿರುವ ಚೋಟು, ಓರ್ವ ಪತ್ನಿಗೆ ಸಿಮ್ದೇಗಾ ಜಿಲ್ಲೆಯ ಬಂಡಿ ಗ್ರಾಮದಲ್ಲಿ ಪಾತ್ರೆ ಮಾರಾಟ ಅಂಗಡಿಯನ್ನು ಮಾಡಿಕೊಟ್ಟಿದ್ದು, ಅದರಿಂದಲೂ ಹಣ ಬರುತ್ತಿದೆ. ಮೂವರು ಪತ್ನಿಯರನ್ನೂ ಸಮಾನವಾಗಿ ಕಾಣುತ್ತೇನೆಂದು ಹೇಳುವ ಚೋಟು, ತನಗೆ ಬರುವ ಹಣವನ್ನು ಎಲ್ಲರಿಗೂ ಹಂಚಿಕೆ ಮಾಡುತ್ತಾನಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...