alex Certify
ಕನ್ನಡ ದುನಿಯಾ       Mobile App
       

Kannada Duniya

ಇವನೇ ನೋಡಿ ಭಾರತದ ಅತಿ ಕಿರಿಯ ಲೇಖಕ…!

ಅಸ್ಸಾಂ ನ ನಾಲ್ಕು ವರ್ಷದ ಬಾಲಕ ಅಯಾನ್ ಗೊಗಾಯ್ ದೇಶದ ಅತಿ ಕಿರಿಯ ಲೇಖಕ ಎಂಬ ಕೀರ್ತಿಗೆ ಪಾತ್ರನಾಗಿದ್ದಾನೆ. ದಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಅಯಾನ್ ಗೆ ಈ ಬಿರುದು ನೀಡಿ ಗೌರವಿಸಿದೆ.

ಉತ್ತರ ಲಖಿಮ್ಪುರ್ ನಲ್ಲಿ ತನ್ನ ಅಜ್ಜ-ಅಜ್ಜಿ ಯೊಂದಿಗೆ ವಾಸಿಸುತ್ತಿರುವ ಅಯಾನ್ ಈಗಾಗಲೇ ಪುಸ್ತಕವೊಂದನ್ನು ಬರೆದಿದ್ದು, ಹನಿಕಾಂಬ್ ಎಂಬ ಹೆಸರಿನ ಈ ಪುಸ್ತಕದ ಬೆಲೆ 250 ರೂಪಾಯಿ. ವಿಶೇಷವೆಂದರೆ ಈ ಪುಸ್ತಕದ ಮುಖಪುಟವನ್ನು ಅಯಾನ್ ರಚಿಸಿದ್ದಾನೆ.

ಅಯಾನ್ ಪೋಷಕರು ಮಿಜೋರಾಂನಲ್ಲಿ ವಾಸಿಸುತ್ತಿದ್ದು, ಅಜ್ಜ-ಅಜ್ಜಿಯೊಂದಿಗಿರುವ ಈತನಿಗೆ ಅಜ್ಜನೇ ಹೀರೋ. ದಿನನಿತ್ಯದ ಘಟನೆಗಳನ್ನು ತನ್ನ ಕಲ್ಪನೆಯಂತೆ ದಾಖಲಿಸುವ ಹವ್ಯಾಸ ಹೊಂದಿರುವ ಅಯಾನ್ ಗೆ ಕ್ರೀಡೆಯಲ್ಲೂ ಆಸಕ್ತಿ ಇದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...