alex Certify
ಕನ್ನಡ ದುನಿಯಾ       Mobile App
       

Kannada Duniya

ಸಂಸಾರದ ಭಾರ ಹೊತ್ತಿದ್ದಾಳೆ ಭಾರತದ ಮೊದಲ ಮಹಿಳಾ ಕೂಲಿ

30 ವರ್ಷದ ಸಂಧ್ಯಾ ಮರವಿ ಭಾರತದ ಮೊದಲ ಮಹಿಳಾ ಕೂಲಿ. ಮಧ್ಯಪ್ರದೇಶದ ಜಬಲ್ಪುರದಲ್ಲಿರೋ ಕಟ್ನಿ ಜಂಕ್ಷನ್ ನಲ್ಲಿ ಪ್ರಯಾಣಿಕರ ಲಗೇಜ್ ಹೊತ್ತು ಬದುಕು ಸಾಗಿಸ್ತಿದ್ದಾಳೆ. ಬಹಳ ಬೇಗನೆ ಸಂಧ್ಯಾ ಪತಿಯನ್ನು ಕಳೆದುಕೊಂಡಿದ್ಲು. ಮಕ್ಕಳ ಜವಾಬ್ಧಾರಿ ಅವಳ ಹೆಗಲೇರಿತ್ತು.

ಮನೆಯಲ್ಲಿ ಅಡುಗೆ, ಮಕ್ಕಳ ಆರೈಕೆ ಅದರ ಜೊತೆಗೆ ಸಂಸಾರ ತೂಗಿಸಲು ಹಣ ಸಂಪಾದಿಸಬೇಕಾದ ಅನಿವಾರ್ಯತೆಯಿತ್ತು. ಸಂಧ್ಯಾ ಧೃತಿಗೆಡಲಿಲ್ಲ, ಮನೆ ನಿಭಾಯಿಸಲು ರೈಲ್ವೆ ನಿಲ್ದಾಣದಲ್ಲಿ ಕೂಲಿಯಾಗಿ ಕೆಲಸ ಶುರು ಮಾಡಿದ್ಲು. ಪ್ರತಿದಿನ ಆಕೆ ಈ ರೈಲು ನಿಲ್ದಾಣಕ್ಕೆ ಬರಲು 45 ಕಿಮೀ ಪ್ರಯಾಣಿಸಬೇಕು.

ವರ್ಷಾರಂಭದಿಂದ್ಲೇ ಸಂಧ್ಯಾ ಈ ಹೊಸ ವೃತ್ತಿಯನ್ನು ಶುರು ಮಾಡಿದ್ದಾಳೆ. ಪ್ರಯಾಣಿಕರ ಲಗೇಜ್ ಗೆ ಹೆಗಲು ಕೊಡುವುದೇ ಈಗ ಅವಳ ಕಾಯಕ. ಎಷ್ಟೇ ಭಾರವಿದ್ರೂ ಅದನ್ನು ಹೊತ್ತು ನಡೆಯುವ ಛಲ ಅವಳಲ್ಲಿದೆ. ಯಾವ ಪುರುಷರಿಗೂ ಆಕೆ ಕಮ್ಮಿಯೇನಿಲ್ಲ. ನಿಲ್ದಾಣದಲ್ಲಿರುವ 40 ಕೂಲಿಗಳ ಪೈಕಿ ಇವಳೊಬ್ಬಳೇ ಮಹಿಳೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...