alex Certify
ಕನ್ನಡ ದುನಿಯಾ       Mobile App
       

Kannada Duniya

17 ವರ್ಷದಿಂದ ಮರಳು, ಮಣ್ಣೇ ಈತನ ಆಹಾರ

ramm

ಹರಿದ್ವಾರ: ಕೆಲವರು ಏನಾದರೂ ಮಾಡಿ, ಜನರ ಗಮನವನ್ನು ಸೆಳೆಯಬೇಕೆಂಬ ಹಂಬಲದಿಂದ ಟ್ಯೂಬ್ ಲೈಟ್ ತಿನ್ನುವುದು, ಗಾಜು ಕಡಿಯುವುದು, ವೇಸ್ಟ್ ಆಯಿಲ್ ಕುಡಿಯುವುದು ಹೀಗೆ ಏನೇನೋ ಮಾಡುತ್ತಾರೆ.

ಇಲ್ಲೊಬ್ಬ ವ್ಯಕ್ತಿ ಬರೋಬ್ಬರಿ 17 ವರ್ಷಗಳಿಂದ ಮಣ್ಣು, ಮರಳನ್ನು ತಿನ್ನುವುದನ್ನು ರೂಢಿಸಿಕೊಂಡಿದ್ದಾನೆ. 40 ವರ್ಷದ ಈತನ ಹೆಸರು ರಾಮೇಶ್ವರ್. ಉತ್ತರಾಖಂಡ್ ನ ಹರಿದ್ವಾರದ ನಿವಾಸಿಯಾಗಿರುವ ರಾಮೇಶ್ವರ್ ಕಳೆದ 17 ವರ್ಷಗಳಿಂದ ಮಣ್ಣು ತಿನ್ನುವುದನ್ನು ರೂಢಿಸಿಕೊಂಡಿದ್ದು, ದಿನಾ 3 ಬಾರಿ ಮಣ್ಣು ತಿನ್ನುತ್ತಾನೆ. ಈತನಿಗೆ ಒಮ್ಮೆ ಹುಷಾರಿಲ್ಲದ ಸಂದರ್ಭದಲ್ಲಿ ಮಣ್ಣು ತಿಂದಿದ್ದನಂತೆ. ಅಂದಿನಿಂದಲೂ ಅದು ಮುಂದುವರೆದಿದೆ.

ಈತನಿಗೆ ಮಣ್ಣು ಸೇವಿಸಿದರೂ, ಅನಾರೋಗ್ಯವೇನೂ ಉಂಟಾಗಿಲ್ಲ. ವೈದ್ಯರು ಕೂಡ ಈತನ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇದೊಂದು ರೀತಿಯ ವಿಚಿತ್ರ ಕಾಯಿಲೆಯಾಗಿದ್ದು, ಮಣ್ಣು ತಿಂದರೂ ಅವರಿಗೆ ಆರೋಗ್ಯ ಸಮಸ್ಯೆ ಕಾಡುವುದಿಲ್ಲ ಎಂದು ವೈದ್ಯರು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...