alex Certify
ಕನ್ನಡ ದುನಿಯಾ       Mobile App
       

Kannada Duniya

ವಿವಿ ಯಲ್ಲಿ ಪಠ್ಯವಾಯ್ತು 3 ನೇ ಕ್ಲಾಸ್ ಓದಿದ ವ್ಯಕ್ತಿಯ ಸಾಹಿತ್ಯ

Padma-Shri-Halda-Nag

ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಇದೇ ಸೋಮವಾರ ಸಾಧಕರಿಗೆ ದೇಶದ ಮೂರನೇ ಅತ್ಯುನ್ನತ ಗೌರವ ಪದ್ಮಶ್ರೀ ಪ್ರಶಸ್ತಿ ಪ್ರದಾನ ಮಾಡಿದರು. ಪ್ರಶಸ್ತಿ ಪುರಸ್ಕೃತರಲ್ಲಿ ಬಹುತೇಕರು ಖ್ಯಾತನಾಮರೇ ಇದ್ದರು. ಅವರಲ್ಲಿ ಒಬ್ಬರು ಗಮನ ಸೆಳೆದರು. ಯಾರವರು ಎಂಬ ಕುತೂಹಲವೇ ಮುಂದೆ ಓದಿ.

ಒಡಿಶಾ ಮೂಲದ ಹಲ್ದಾರ್ ನಾಗ್ ಎಂಬ ವ್ಯಕ್ತಿ ರಾಷ್ಟ್ರಪತಿ ಅವರಿಂದ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ್ದಾರೆ. ಇವರು ಓದಿರುವುದು ಕೇವಲ 3ನೇ ತರಗತಿ. ಇವರು ಬರೆದ ಕವನಗಳು ವಿಶ್ವವಿದ್ಯಾಲಯದಲ್ಲಿ ಪಠ್ಯವಾಗಿವೆ. ಮಾತ್ರವಲ್ಲ, ಐವರು ಇವರ ಸಾಹಿತ್ಯದ ಬಗ್ಗೆ ಸಂಶೋಧನಾ ಪ್ರಬಂಧ ಮಂಡಿಸಿ ಐವರು ಪಿ.ಹೆಚ್.ಡಿ. ಪದವಿ ಪಡೆದುಕೊಂಡಿದ್ದಾರೆ. ಹಲ್ದಾರ್ ನಾಗ್ 3ನೇ ತರಗತಿ ಓದಿದ ನಂತರ ಶಾಲೆಯನ್ನು ಬಿಡಬೇಕಾಯಿತು. ಮನೆಯಲ್ಲಿ ಕಿತ್ತು ತಿನ್ನುವ ಬಡತನವಿತ್ತು.

ಇದರಿಂದ ಜೀವನೋಪಾಯಕ್ಕಾಗಿ ಹಲವು ಕೆಲಸಗಳನ್ನು ಮಾಡಿದ ಹಲ್ದಾರ್ ನಾಗ್, ಬಳಿಕ ಶಾಲೆಯೊಂದರ ಬಳಿ ಸಣ್ಣ ಗೂಡಂಗಡಿ ಒಂದನ್ನು ಆರಂಭಿಸಿದರು. ಅಲ್ಲಿಗೆ ಬರುತ್ತಿದ್ದ ಶಾಲೆಯ ಮಕ್ಕಳನ್ನು ಕಂಡ ಅವರಿಗೆ, ತಾವೂ ಓದು, ಬರಹ ಕಲಿಯಬೇಕೆಂಬ ಮನಸ್ಸಾಗಿದೆ.

ನಂತರ ಓದುವುದು, ಬರೆಯುವುದನ್ನು ರೂಢಿಸಿಕೊಂಡು ಸಾಹಿತ್ಯದ ಅಧ್ಯಯನ ಮಾಡುತ್ತಾ, ಕವನಗಳನ್ನು ಬರೆದಿದ್ದಾರೆ. ಅವರ ಕವನಗಳು ಸ್ಥಳಿಯ ಪತ್ರಿಕೆಯೊಂದರಲ್ಲಿ ಪ್ರಕಟವಾಗಿ ಓದುಗರ ಮೆಚ್ಚುಗೆ ಗಳಿಸಿದವು. ನಂತರ ಅವರು ಬರೆಯುತ್ತಾ, ಓದಂತೆ ಕೋಸ್ಲಿ ಭಾಷೆಯ ಪ್ರಮುಖ ಸಾಹಿತಿಯೂ ಆದರು.

ಹಲ್ದಾರ್ ನಾಗ್ ಕೋಸ್ಲಿ ಭಾಷೆಯ ಪ್ರಮುಖ ಸಾಹಿತಿಯಾಗಿದ್ದು, ಸಂಬಾಲ್ ಪುರ್ ವಿಶ್ವವಿದ್ಯಾಲಯದ ಪಠ್ಯದಲ್ಲಿ ಅವರ ಕವನ ಬಳಸಿಕೊಳ್ಳಲಾಗಿದೆ. ತಮ್ಮ ಕವನಗಳನ್ನು ಹಾಡುವುದನ್ನೂ ಅವರು ರೂಢಿಸಿಕೊಂಡಿದ್ದು, ಅವರನ್ನು ಗುರುತಿಸಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...