alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಕೆಲಸ ಮಾಡಿದವರಿಗೆ ಕೊಡ್ತಾರಂತೆ 25 ಲಕ್ಷ…!

fatwa-man

ಕೋಲ್ಕತ್ತಾದ ಟಿಪ್ಪು ಸುಲ್ತಾನ್ ಮಸೀದಿಯ ಮುಖ್ಯಸ್ಥ ನೂರ್ ಉರ್ ರೆಹ್ಮಾನ್ ಬರ್ಕತಿ ಆಗಾಗಾ ಫತ್ವಾ ಹೊರಡಿಸುವ ಮೂಲಕ, ಧಾರ್ಮಿಕ ನಿರ್ಬಂಧಗಳನ್ನು ಹೇರುವ ಮೂಲಕ ಸುದ್ದಿಯಾಗ್ತಾರೆ. ಇದೀಗ ನೋಟು ನಿಷೇಧವನ್ನು ವಿರೋಧಿಸಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧವೇ ಕೆಂಡ ಕಾರಲು ಶುರುಮಾಡಿದ್ದಾರೆ.

500 ಮತ್ತು 1000 ರೂಪಾಯಿ ನಿಷೇಧದಿಂದ ಎಷ್ಟೋ ಮಂದಿ ಕಡುಬಡತನಕ್ಕೆ ದೂಡಲ್ಪಟ್ಟಿದ್ದಾರಂತೆ. ಹಾಗಾಗಿ ಮೋದಿ ಮುಖಕ್ಕೆ ಮಸಿ ಬಳಿಯಲು ನೂರ್ ಉರ್ ರೆಹ್ಮಾನ್ ಸ್ಕೆಚ್ ಹಾಕಿದ್ದಾರೆ. ಮೋದಿ ಅವರ ಮುಖಕ್ಕೆ ಮಸಿ ಬಳಿದರೆ 25 ಲಕ್ಷ ರೂಪಾಯಿ ನಗದು ಬಹುಮಾನ ಕೊಡುವುದಾಗಿ ಘೋಷಿಸಿದ್ದಾರೆ.

ಕೂಡಲೇ ನೂರ್ ಉರ್ ರೆಹ್ಮಾನ್ ಅವರನ್ನು ಬಂಧಿಸುವಂತೆ ಬಿಜೆಪಿ ಪೊಲೀಸರಿಗೆ ದೂರು ನೀಡಿದೆ. ಬ್ಯಾಂಕ್ ಕ್ಯೂನಲ್ಲಿ ನಿಂತು ಮೃತಪಟ್ಟವರ ಸಾವಿಗೂ ಮೋದಿಯೇ ಹೊಣೆ ಎಂದಿರುವ ನೂರ್, ಇದು ಪ್ರಧಾನಿ ವಿರುದ್ಧ ತಾನು ಹೊರಡಿಸಿರುವ ಫತ್ವಾ ಅಂತಾ ಹೇಳಿಕೊಂಡಿದ್ದಾರೆ. ಈ ಫತ್ವಾವನ್ನು ಮೆಚ್ಚಿಕೊಂಡು ಹಲವರು ಫೋನ್ ಕರೆ ಮಾಡಿದ್ದಾರೆ ಅಂತಾ ತಿಳಿಸಿದ್ದಾರೆ.

ಈ ಹಿಂದೆ ಕೂಡ ಹಲವು ಬಾರಿ ಇಂತಹ ಫತ್ವಾ ಹೊರಡಿಸುವ ಮೂಲಕ ರೆಹ್ಮಾನ್ ಹಲವರ ಕೆಂಗಣ್ಣಿಗೆ ತುತ್ತಾಗಿದ್ದರು. ಪಶ್ಚಿಮ ಬಂಗಾಳದಲ್ಲಿ ಶೇ.30 ರಷ್ಟು ಮುಸ್ಲಿಂ ಸಮುದಾಯದವರಿದ್ದು, ಮಮತಾ ಬ್ಯಾನರ್ಜಿ ಅಧಿಕಾರಕ್ಕೆ ಬಂದ ಮೇಲೆ ಟಿಎಂಸಿಯ ಹಲವು ರ್ಯಾಲಿಗಳಲ್ಲೂ ಕಾಣಿಸಿಕೊಂಡಿದ್ದಾರೆ.

Jobs by neuvoo.co.in

Subscribe Newsletter

Get latest updates on your inbox...

Opinion Poll

  • ವಿಐಪಿ ಕಾರ್ ಮೇಲಿನ ಕೆಂಪು ದೀಪ ತೆರವುಗೊಳಿಸಿದರೆ ಸಾರ್ವಜನಿಕರ ಸಮಸ್ಯೆಗೆ ಪರಿಹಾರ ಸಿಗಲಿದೆಯೇ..?

    View Results

    Loading ... Loading ...