alex Certify
ಕನ್ನಡ ದುನಿಯಾ       Mobile App
       

Kannada Duniya

‘ವಂದೇ ಮಾತರಂ’ ಹಾಡಲು ಒಲ್ಲೆ ಎಂದ ಮೇಯರ್…!

ಬಹುಜನ ಸಮಾಜವಾದಿ ಪಕ್ಷದ ನಾಯಕಿ ಹಾಗೂ ಮೀರತ್ ನ ನೂತನ ಮೇಯರ್ ಸುನೀತಾ ವರ್ಮಾ ಹೊಸ ವಿವಾದ ಹುಟ್ಟುಹಾಕಿದ್ದಾರೆ. ಸಭೆಯ ಆರಂಭಕ್ಕೂ ಮುನ್ನ ವಂದೇ ಮಾತರಂ ಗೀತೆಯನ್ನು ಹಾಡಲು ನಿರಾಕರಿಸಿದ್ದಾರೆ. ಈ ಹಿಂದಿನ ಮೇಯರ್ ಗಳು ಮೀಟಿಂಗ್ ಗೂ ಮುನ್ನ ವಂದೇ ಮಾತರಂ ಹಾಡುವುದನ್ನು ಕಡ್ಡಾಯ ಮಾಡಿದ್ದರು.

ನಿಯಮದ ಪ್ರಕಾರ ಸಭೆಗೂ ಮುನ್ನ ರಾಷ್ಟ್ರಗೀತೆಯಾದ ಜನಗಣಮನವನ್ನು ಹಾಡಬೇಕು, ವಂದೇ ಮಾತರಂ ಅಲ್ಲ ಎಂದಿದ್ದಾರೆ ಮೇಯರ್ ಮೇಡಂ. ಯಾರು ವಂದೇ ಮಾತರಂ ಹಾಡಲು ನಿರಾಕರಿಸುತ್ತಾರೋ ಅವರು ತಮ್ಮ ತಾಯ್ನಾಡಿಗೇ ಅವಮಾನ ಮಾಡಿದಂತೆ ಅಂತಾ ಡಿಸೆಂಬರ್ 7ರಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಹೇಳಿದ್ದರು.

ತಾಯಿ ಭಾರತಾಂಬೆಗೆ ಸೆಲ್ಯೂಟ್ ಮಾಡದೇ ಅಫ್ಜಲ್ ಗುರುಗೆ ಮಾಡುತ್ತೀರಾ ಎಂದು ಪ್ರಶ್ನಿಸಿದ್ದರು. ಆದ್ರೆ ಉಪರಾಷ್ಟ್ರಪತಿಗಳ ಹೇಳಿಕೆ ಕೂಡ ಮೇಯರ್ ಸುನೀತಾ ಮೇಲೆ ಯಾವುದೇ ಪ್ರಭಾವ ಬೀರಿಲ್ಲ. ವಂದೇ ಮಾತರಂ ಹಾಡಲು ನಿರಾಕರಿಸುವ ಮೂಲಕ ಅವರು ಇತರರ ಕೆಂಗಣ್ಣಿಗೆ ತುತ್ತಾಗಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...