alex Certify
ಕನ್ನಡ ದುನಿಯಾ       Mobile App
       

Kannada Duniya

ಮೋದಿ ಚಿತ್ರವಿರುವ ಡ್ರೆಸ್ ಹಾಕಿದ್ದ ರಾಖಿಗೆ ಸಂಕಷ್ಟ

Meerut court accepts plea against Rakhi Sawant for wearing ‘Modi’ dressತನ್ನ ಹೇಳಿಕೆ ಹಾಗೂ ನಡೆಗಳಿಂದ ಸದಾ ಸುದ್ದಿಯಲ್ಲಿರುವ ಬಾಲಿವುಡ್ ನಟಿ ರಾಖಿ ಸಾವಂತ್, ಅಮೆರಿಕದ ಇಲಿನಾಯ್ಸ್ ನಲ್ಲಿರುವ ಅನಿವಾಸಿ ಭಾರತೀಯರು ಆಯೋಜಿಸಿದ್ದ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಭಾಗವಹಿಸಿದ್ದ ವೇಳೆ ತಾನು ಧರಿಸಿದ್ದ ಡ್ರೆಸ್ ಕಾರಣಕ್ಕಾಗಿ ಸಂಕಷ್ಟಕ್ಕೊಳಗಾಗಿದ್ದಾಳೆ.

ವಿಚಿತ್ರ ರೀತಿಯಲ್ಲಿದ್ದ ಸೆಕ್ಸಿ ಡ್ರೆಸ್ ತೊಟ್ಟಿದ್ದ ರಾಖಿ ಸಾವಂತ್, ಅದರ ಮೇಲೆಲ್ಲಾ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರ ಅಂಟಿಸಿಕೊಂಡಿದ್ದು, ಅಶ್ಲೀಲ ಭಂಗಿಯಲ್ಲಿ ಪೋಸ್ ಕೂಡ ನೀಡಿದ್ದಳು. ಇದು ವಿವಾದಕ್ಕೆ ಕಾರಣವಾಗಿತ್ತಲ್ಲದೇ ರಾಖಿಯ ನಡೆಯಿಂದ ಆಕ್ರೋಶಗೊಂಡಿರುವ ಮೀರತ್ ಮೂಲದ ಸ್ವಯಂ ಸೇವಾ ಸಂಸ್ಥೆಯೊಂದು ಈಗ ಕೋರ್ಟ್ ಮೆಟ್ಟಿಲೇರಿದೆ.

ಭಾರತದ ಪ್ರಧಾನಿಯವರ ಚಿತ್ರವನ್ನು ತನ್ನ ಡ್ರೆಸ್ ಮೇಲೆ ಹಾಕಿಕೊಳ್ಳುವ ಮೂಲಕ ರಾಖಿ ಸಾವಂತ್ ನರೇಂದ್ರ ಮೋದಿಯವರಿಗೆ ಅಗೌರವ ತೋರಿದ್ದಾಳೆ. ಜೊತೆಗೆ ವಿಶ್ವಮಟ್ಟದಲ್ಲಿ ಭಾರತದ ಮಾನವನ್ನು ಹರಾಜು ಹಾಕಿದ್ದಾಳೆ ಎಂದು ಆರೋಪಿಸಿ ಸ್ವಯಂ ಸೇವಾ ಸಂಸ್ಥೆ, ಮಹಿಳಾ ಸಂರಕ್ಷಣಾ ಸೊಸೈಟಿ ಈಗ ಮೀರತ್ ನ್ಯಾಯಾಲಯದ ಮೆಟ್ಟಿಲೇರಿದ್ದು, ಇದನ್ನು ಅಂಗೀಕರಿಸಿರುವ ನ್ಯಾಯಾಲಯ ಆಗಸ್ಟ್ 17 ಕ್ಕೆ ವಿಚಾರಣೆಯನ್ನು ಮುಂದೂಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...