alex Certify
ಕನ್ನಡ ದುನಿಯಾ       Mobile App
       

Kannada Duniya

ಪೇದೆ ಹುದ್ದೆಗೆ ಆಯ್ಕೆಯಾಗಿದ್ದಾರೆ ಪದವೀಧರರು…!

ಇತ್ತೀಚೆಗೆ ಯುವಕರು ಸರ್ಕಾರಿ ಕೆಲಸದ ಕಡೆಗೆ ಹೆಚ್ಚು ಒಲವು ತೋರಿಸುತ್ತಿದ್ದಾರೆ ಅನ್ನಿಸುತ್ತಿದೆ. ಕಾರಣ ಹರಿಯಾಣದಲ್ಲಿ ಪೊಲೀಸ್ ಕಾನ್ಸ್ ಟೇಬಲ್ ಹುದ್ದೆಗೆ ಎಂಬಿಎ, ಎಲ್ ಎಲ್ ಬಿ, ಎಂ ಟೆಕ್ ಮಾಡಿದ ಯುವಕರು ಸೇರ್ಪಡೆಯಾಗುತ್ತಿದ್ದಾರೆ.

ಹರಿಯಾಣ ಸ್ಟಾಫ್ ಸೆಲೆಕ್ಷನ್ ಕಮಿಷನ್ 4,225 ಕಾನ್ಸ್ ಟೇಬಲ್ ಪೋಸ್ಟ್ ಗಳನ್ನು ತುಂಬಲು ಅಧಿಸೂಚನೆ ಹೊರಡಿಸಿತ್ತು. ಈ ಹಿನ್ನೆಲೆಯಲ್ಲಿ ಸ್ನಾತಕೋತ್ತರ ಪದವೀಧರರು ಸೇರಿದಂತೆ ವೃತ್ತಿಪರ ಪದವಿ ಪಡೆದವರು ತರಬೇತಿ ಪಡೆಯುತ್ತಿದ್ದಾರೆ ಎಂದು ಹರಿಯಾಣ ಪೊಲೀಸ್ ಮಹಾ ನಿರ್ದೇಶಕ ಬಿ.ಎಸ್. ಸಂಧು ತಿಳಿಸಿದ್ದಾರೆ.

ಹರಿಯಾಣ ಪೊಲೀಸ್ ಸೇವೆಯಲ್ಲಿ ಪಾರದರ್ಶಕ ನೇಮಕಾತಿ ಪ್ರಕ್ರಿಯೆ ಸಲುವಾಗಿ, ಗ್ರಾಮೀಣ ಪ್ರದೇಶದಿಂದ 3,827 ಮತ್ತು ನಗರ ಪ್ರದೇಶದಿಂದ 398 ಅರ್ಹ ಯುವಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಇವರಲ್ಲಿ ಬಹುತೇಕ ಯುವಕರು ಉನ್ನತ ವ್ಯಾಸಂಗ ಮಾಡಿದವರೇ ಇದ್ದಾರೆ. ಅವರುಗಳ ಪೈಕಿ 2 ಮಂದಿ ಎಂ ಫಿಲ್, 15 ಮಂದಿ ಎಂಟೆಕ್, 16 ಮಂದಿ ಎಂಸಿಎ, 36 ಮಂದಿ ಎಂಬಿಎ, 33 ಮಂದಿ ಎಂಎಸ್ಸಿ, 38 ಮಂದಿ ಎಂ.ಕಾಂ, 103 ಮಂದಿ ಎಂಎ ಹಾಗೂ 273 ಮಂದಿ ಬಿಟೆಕ್ ಪದವೀಧರರಿದ್ದಾರೆ.

ಪೊಲೀಸ್ ಇಲಾಖೆಗೆ ನೇಮಕವಾದ ಈ ಯುವಕರಿಗೆ ಪೊಲೀಸ್ ಆಡಳಿತ, ರೇಡಿಯೋ ಟೆಲಿಕಾಂ, ಟ್ರಾಫಿಕ್ ಮ್ಯಾನೇಜ್ ಮೆಂಟ್, ಕಾನೂನು ಮತ್ತು ಸುವ್ಯವಸ್ಥೆ, ನಿರ್ವಹಣೆ, ಕ್ರಿಮಿನಲ್ ಪ್ರೊಸಿಜರ್ಸ್, ಕಂಪ್ಯೂಟರ್ ಕಲಿಕೆಯ ವಿಷಯಗಳ ಬಗ್ಗೆ ತರಬೇತಿ ನೀಡಲಾಗಿದೆ ಎಂದು ಡಿಜಿಪಿ ತಿಳಿಸಿದ್ಧಾರೆ.

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...