alex Certify
ಕನ್ನಡ ದುನಿಯಾ       Mobile App
       

Kannada Duniya

ಲೇಟ್ ಲತೀಫ್ ಮೇಯರ್ ಗೆ ಸಿಕ್ತು ವಿಶೇಷ ಗಿಫ್ಟ್

meyar-mumb

ಮುಂಬೈ: ಕಳೆದ ಮಾರ್ಚ್ ನಲ್ಲಿ ಬೃಹನ್ಮುಂಬಯಿ ಮಹಾನಗರ ಪಾಲಿಕೆ ಮೇಯರ್ ಆಗಿ ಆಯ್ಕೆಯಾಗಿರುವ, ವಿಶ್ವನಾಥ್ ಮಹದೇಶ್ವರ್ ಸಮಯಕ್ಕೆ ಸರಿಯಾಗಿ ಸಭೆಗೆ ಆಗಮಿಸುತ್ತಿಲ್ಲ.

ಪಾಲಿಕೆಯ ಸಭೆಗಳಿಗೆ ನಿರಂತರವಾಗಿ ಅವರು ಲೇಟಾಗಿ ಬರುತ್ತಿರುವುದರಿಂದ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಕಾರ್ಪೊರೇಟರ್ ಗಳು, ಗಡಿಯಾರವನ್ನೇ ಉಡುಗೊರೆಯಾಗಿ ನೀಡುವ ಮೂಲಕ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಇದುವರೆಗೂ ಸುಮಾರು 10 ಸಭೆಗಳನ್ನು ಮೇಯರ್ ಅವರಿಗಾಗಿಯೇ ರದ್ದುಪಡಿಸಲಾಗಿದೆ. ಅವರು ಬ್ಯುಸಿಯಾಗಿರುತ್ತಾರೆ ನಿಜ. ಆದರೆ, ಒಂದು ಸಭೆಗಾದರೂ ಸರಿಯಾದ ಸಮಯಕ್ಕೆ ಬಂದ ಉದಾಹರಣೆಯೇ ಇಲ್ಲ ಎನ್ನುತ್ತಾರೆ ಎಂ.ಎನ್.ಎಸ್. ಸದಸ್ಯರೊಬ್ಬರು.

ಇನ್ನು ಪಾಲಿಕೆಯಲ್ಲಿ 223 ಕಾರ್ಪೊರೇಟರ್ ಗಳಿದ್ದು, ಅವರ ಖರ್ಚು- ವೆಚ್ಚ, ಅಜೆಂಡಾ ಕಾಪಿ ವೆಚ್ಚ, ಪ್ರತಿ ಸಭೆಗೆ ತಗುಲುವ ವೆಚ್ಚ ಇದೆಲ್ಲ ಮೇಯರ್ ಕಾರಣಕ್ಕೆ ನಷ್ಟವಾಗುತ್ತದೆ.

ಸಭೆಯಲ್ಲಿ ಯಾವುದೇ ತೀರ್ಮಾನಗಳನ್ನು ಕೈಗೊಳ್ಳುವುದು ಮೇಯರ್ ಅವರೇ ಆಗಿರುವುದರಿಂದ ಅವರಿಗೆ ಸಮಯದ ಮಹತ್ವದ ಬಗ್ಗೆ ಎಚ್ಚರಿಸಲು ಗಡಿಯಾರ ಗಿಫ್ಟ್ ಆಗಿ ನೀಡಲಾಗಿದೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...