alex Certify
ಕನ್ನಡ ದುನಿಯಾ       Mobile App
       

Kannada Duniya

ಬೆಳಗಿನ ವಾಕ್ ಗೆ ಬಾಗಿಲು ತೆರೆಯಲಿದೆ ಡ್ರೀಮ್ ಪಾರ್ಕ್

mayawati_park

ಬಿಎಸ್ಪಿ ನಾಯಕಿ ಮತ್ತು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ ಡ್ರೀಮ್ ಪಾರ್ಕ್ ನಲ್ಲಿ ಇನ್ಮುಂದೆ ಜನರು ಬೆಳಿಗ್ಗೆ ವಾಕ್ ಮಾಡಬಹುದಾಗಿದೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಲಕ್ಷಾಂತರ ರೂಪಾಯಿ ವೆಚ್ಛದಲ್ಲಿ ನಿರ್ಮಾಣವಾದ ಪಾರ್ಕ್ ಬಗ್ಗೆ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ.

ಮಾರ್ನಿಂಗ್ ವಾಕ್ ಗಾಗಿ  ಪಾರ್ಕ್ ಬಾಗಿಲು ತೆರೆಯುವ ನಿರ್ಧಾರಕ್ಕೆ ಬಂದಿದೆ ಯೋಗಿ ಸರ್ಕಾರ. ಈ ಪಾರ್ಕ್ ಆಗಸ್ಟ್ 15ರಿಂದ ಬೆಳಿಗ್ಗೆ ವಾಕ್ ಬರುವವರಿಗೆ ತೆರೆದುಕೊಳ್ಳಲಿದೆ. ಆದ್ರೆ ಇದಕ್ಕಾಗಿ ಜನರು ಟಿಕೆಟ್ ಕೊಳ್ಳಬೇಕಾಗಿದೆ. 200 ರೂಪಾಯಿ ತಿಂಗಳ ಟಿಕೆಟ್ ಹಾಗೂ 600 ರೂಪಾಯಿಗೆ 6 ತಿಂಗಳ ಪಾಸ್ ನೀಡಲು ನಿರ್ಧರಿಸಲಾಗಿದೆ.

ಚಳಿಗಾಲದಲ್ಲಿ ಬೆಳಿಗ್ಗೆ 6 ಗಂಟೆಯಿಂದ 9 ಗಂಟೆಯವರೆಗೆ ಹಾಗೂ ಬೇಸಿಗೆಯಲ್ಲಿ ಬೆಳಿಗ್ಗೆ 5 ಗಂಟೆಯಿಂದ 8 ಗಂಟೆಯವರೆಗೆ ಪಾರ್ಕ್ ಬಾಗಿಲು ತೆರೆದಿರಲಿದೆ. ಇಷ್ಟು ದಿನ ಈ ಪಾರ್ಕ್ ಬೆಳಿಗ್ಗೆ 11 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಮಾತ್ರ ತೆರೆದಿರುತ್ತಿತ್ತು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...