alex Certify
ಕನ್ನಡ ದುನಿಯಾ       Mobile App
       

Kannada Duniya

ಮಾಯಾವತಿ ವೇಶ್ಯೆಗಿಂತ ಕಡೆ ಎಂದ ಬಿ.ಜೆ.ಪಿ. ಮುಖಂಡ

dayashankar-mayawati up n

ನವದೆಹಲಿ: ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ, ಬಿ.ಎಸ್.ಪಿ.ನಾಯಕಿ ಮಾಯಾವತಿ ಅವರನ್ನು ವೇಶ್ಯೆಗೆ ಹೋಲಿಸಿ ಮಾತನಾಡಿದ ಘಟನೆ ನಡೆದಿದ್ದು, ಸಂಸತ್ ನಲ್ಲಿಯೂ ಕೋಲಾಹಲಕ್ಕೆ ಕಾರಣವಾಗಿದೆ. ಇಂತಹ ಹೇಳಿಕೆ ನೀಡಿದ ಬಿ.ಜೆ.ಪಿ. ಮುಖಂಡನ ತಲೆದಂಡವಾಗಿದೆ.

ಮುಂದಿನ ವರ್ಷ ಉತ್ತರ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ರಾಜಕೀಯ ಪಕ್ಷಗಳಲ್ಲಿ ಚಟುವಟಿಕೆ ಗರಿಗೆದರಿವೆ. ಉತ್ತರ ಪ್ರದೇಶದ ಬಿ.ಜೆ.ಪಿ. ಉಪಾಧ್ಯಕ್ಷ ದಯಾ ಶಂಕರ್ ಸಿಂಗ್ ಸುದ್ದಿಗೋಷ್ಠಿಯಲ್ಲಿ ಮಾತನಾಡುವಾಗ, ಮಾಯಾವತಿ 1 ಕೋಟಿ ರೂ.ಕೊಟ್ಟವರಿಗೆ ಟಿಕೆಟ್ ಕೊಡುತ್ತಾರೆ. 2 ಕೋಟಿ ಕೊಟ್ಟವರಿಗೆ ಅದೇ ಟಿಕೆಟ್ ಕೊಡುತ್ತಾರೆ. ಯಾರಾದರೂ 3 ಕೋಟಿ ರೂ.ಕೊಟ್ಟರೆ, 2 ಕೋಟಿ ರೂ ಕೊಟ್ಟವರ ಬದಲಿಗೆ ಅವರಿಗೆ ಟಿಕೆಟ್ ಕೊಡುತ್ತಾರೆ. ಟಿಕೆಟ್ ಹಂಚಿಕೆ ವಿಚಾರದಲ್ಲಿ ಅವರ ವ್ಯಕ್ತಿತ್ವ ವೇಶ್ಯೆಗಿಂತ ಕಡೆ ಎಂದು ಹೇಳಿಕೆ ನೀಡಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿದ ಮಾಯಾವತಿ, ಮುಂದಿನ ಚುನಾವಣೆ ಬಗ್ಗೆ ಬಿ.ಜೆ.ಪಿ.ನಾಯಕರಲ್ಲಿ ಆವರಿಸಿರುವ ಭೀತಿ, ಭಯದಿಂದ ಇಂತಹ ಹೇಳಿಕೆ ನೀಡಿದ್ದಾರೆ. ಅವರ ಪಕ್ಷದ ಸಂಸ್ಕೃತಿಯನ್ನು ಇದು ಬಿಂಬಿಸುತ್ತದೆ ಎಂದು ಹೇಳಿದ್ದಾರೆ. ಸಂಸತ್ ಉಭಯ ಸದನಗಳಲ್ಲೂ ಹೇಳಿಕೆ ಬಗ್ಗೆ ಪಕ್ಷಾತೀತವಾಗಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಸಚಿವ ಅರುಣ್ ಜೇಟ್ಲಿ ಕ್ಷಮೆಯಾಚಿಸಿದ್ದಾರೆ. ಅಲ್ಲದೇ, ದಯಾಶಂಕರ್ ಸಿಂಗ್ ಅವರನ್ನು ಉಪಾಧ್ಯಕ್ಷ ಸ್ಥಾನದಿಂದ ವಜಾ ಮಾಡಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...