alex Certify
ಕನ್ನಡ ದುನಿಯಾ       Mobile App
       

Kannada Duniya

ಐತಿಹಾಸಿಕ ತೀರ್ಪು ನೀಡಿದ ಸುಪ್ರೀಂ ಕೋರ್ಟ್

_053615527supremecourt-ll

ಜಮ್ಮು-ಕಾಶ್ಮೀರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪನ್ನು ನೀಡಿದೆ. ಜಮ್ಮು-ಕಾಶ್ಮೀರ ಕೋರ್ಟ್ ನಲ್ಲಿರುವ ದಾವೆಗಳನ್ನು ಬೇರೆ ರಾಜ್ಯಗಳಿಗೆ ವರ್ಗಾಯಿಸುವ ಅವಕಾಶ ನೀಡಲಾಗಿದೆ.

ಸುಪ್ರೀಂ ಕೋರ್ಟ್ ನ ಐವರು ನ್ಯಾಯಾಧೀಶರ ಸಂವಿಧಾನ ಪೀಠ, ಜಮ್ಮು-ಕಾಶ್ಮೀರದ ಪ್ರಮುಖ ಪ್ರಕರಣಗಳನ್ನು ಬೇರೆ ರಾಜ್ಯಗಳಿಗೆ ವರ್ಗಾಯಿಸಬಹುದೆಂದು ತೀರ್ಪು ನೀಡಿದೆ. ಕಕ್ಷಿದಾರರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಈ ತೀರ್ಪು ನೀಡಿದ್ದಾರೆ. ಜಮ್ಮು-ಕಾಶ್ಮೀರದ ಸ್ಥಳೀಯ ಕಾನೂನಿನ ಪ್ರಕಾರ ದಾವೆಗಳನ್ನು ಬೇರೆ ರಾಜ್ಯಗಳಿಗೆ ವರ್ಗಾಯಿಸುವಂತಿಲ್ಲ. ಆದ್ರೆ ಕಕ್ಷಿದಾರರ ಕೋರಿಕೆಯನ್ನು ಮನ್ನಿಸಿ ಜಮ್ಮು-ಕಾಶ್ಮೀರದ ಹೊರಗೆ ಪ್ರಕರಣಗಳನ್ನು ವರ್ಗಾಯಿಸಬಹುದೆಂದು ಕೋರ್ಟ್ ಹೇಳಿದೆ.

ಸಿ.ಆರ್.ಪಿ.ಸಿ. 25ರ ಪ್ರಕಾರ ಯಾವುದೇ ರಾಜ್ಯದ ಪ್ರಕರಣವನ್ನು ಇನ್ನೊಂದು ರಾಜ್ಯಕ್ಕೆ ವರ್ಗಾಯಿಸಬಹುದಾಗಿದೆ. ಆದ್ರೆ ಜಮ್ಮು-ಕಾಶ್ಮೀರ ಪಿನಲ್ ಕೋಡ್ ಆರ್ ಪಿ ಸಿ ಪ್ರಕಾರ ಈ ಅಧಿಕಾರವಿರಲಿಲ್ಲ. ಆದ್ರೀಗ ಸುಪ್ರೀಂ ಕೋರ್ಟ್ ತೀರ್ಪಿನ ಮೇರೆಗೆ ಜಮ್ಮು-ಕಾಶ್ಮೀರದ ಪ್ರಕರಣವನ್ನು ಬೇರೆ ರಾಜ್ಯಗಳಿಗೆ ವರ್ಗಾಯಿಸಬಹುದಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...