alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಡಿಗೆ ತಾಯಿಯಿಂದ ಮಗು ಪಡೆಯುವವರಿಗೆ ಇಲ್ಲಿದೆ ಖುಷಿ ಸುದ್ದಿ

Happy-mother-with-the-child-on-the-hands

ಮಗು ಹೆತ್ತವರಿಗೆ ಮಾತ್ರ ಹೆರಿಗೆ ರಜೆ ಸೌಲಭ್ಯ ಸಿಗುತ್ತದೆ. ಸಂತಾನ ಭಾಗ್ಯ ಇಲ್ಲದವರು ಒಂದು ವೇಳೆ ಬಾಡಿಗೆ ತಾಯಂದಿರಿಂದ ಮಗು ಪಡೆದರೂ, ಮಕ್ಕಳನ್ನು ಆರೈಕೆ ಮಾಡಲು ಅವರಿಗೆ ರಜೆ ಸಿಗುತ್ತಿರಲಿಲ್ಲ. ಹೀಗಾಗಿ ಎಷ್ಟೋ ಮಂದಿ ಮಕ್ಕಳನ್ನು ಪಡೆಯಲು ಹಿಂದೇಟು ಹಾಕುತ್ತಿದ್ದರು. ಇನ್ನು ಮುಂದೆ ಅವರು ಚಿಂತೆ ಮಾಡಬೇಕಿಲ್ಲ.

ಬಾಡಿಗೆ ತಾಯಂದಿರಿಂದ ಮಕ್ಕಳನ್ನು ಪಡೆದವರಿಗೂ ಹೆರಿಗೆ ರಜೆ ಮಂಜೂರು ಮಾಡಬಹುದೆಂದು, ಮುಂಬೈ ಹೈಕೋರ್ಟ್ ತೀರ್ಪು ನೀಡಿದೆ. ಮಕ್ಕಳ ದತ್ತು ರಜೆ ಮತ್ತು ನಿಯಮಗಳ ಕುರಿತಂತೆ ವಿಸ್ತೃತವಾಗಿ ಪರಿಶೀಲನೆ ನಡೆಸಿದ ಹೈಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ಬಾಡಿಗೆ ತಾಯಿಯಿಂದ ಮಗು ಪಡೆದವರು ಕೂಡ ಇತರೆ ಮಹಿಳೆಯರಂತೆಯೇ ರಜೆ ಪಡೆಯಲು ಅವರು ಅರ್ಹರು ಎಂದು ತಿಳಿಸಿದೆ. ಅಲ್ಲದೇ, ಬಾಡಿಗೆ ತಾಯಿಯಿಂದ ಮಗು ಪಡೆದವರಿಗೆ ರಜೆ ಕೊಡಬಾರದೆಂದು ನಿಯಮದಲ್ಲಿ ಹೇಳಿಲ್ಲ ಎಂದು ಹೇಳಲಾಗಿದೆ.

ರೈಲ್ವೇ ಇಲಾಖೆಯ ಮಹಿಳಾ ಉದ್ಯೋಗಿಯೊಬ್ಬರು, ಬಾಡಿಗೆ ತಾಯಿಯಿಂದ ಮಗು ಪಡೆಯಲು ಮುಂದಾಗಿ, ಅವರಿಗೆ 33 ವಾರ ತುಂಬಿದ ಸಂದರ್ಭದಲ್ಲಿ ಹೆರಿಗೆ ರಜೆ ಬೇಕೆಂದು ಇಲಾಖೆಗೆ ಮನವಿ ಮಾಡಿದ್ದರೂ, ರಜೆ ಮಂಜೂರು ಆಗಿರಲಿಲ್ಲ. ಅವರು ಕೋರ್ಟ್ ಮೊರೆ ಹೋಗಿದ್ದು, ಅವರಿಗೆ 180 ದಿನ ರಜೆ ಮಂಜೂರು ಮಾಡಲು ಆದೇಶ ನೀಡಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...