alex Certify
ಕನ್ನಡ ದುನಿಯಾ       Mobile App
       

Kannada Duniya

‘ಮ್ಯಾಚ್ ಬಾಕ್ಸ್’ ಕುರಿತ ಪತ್ರದಲ್ಲೇನಿದೆ ಗೊತ್ತಾ…?

ಮೊರಾದಾಬಾದ್ ನ ವಿದ್ಯುತ್ ಇಲಾಖೆಯಲ್ಲಿ ಅಸಿಸ್ಟೆಂಟ್ ಎಂಜಿನಿಯರ್ ಆಗಿರೋ ಸುಶೀಲ್ ಕುಮಾರ್ ತಮ್ಮ ಜೂನಿಯರ್ ಮೋಹಿತ್ ಪಂಥ್ ಗೆ ಪತ್ರವೊಂದನ್ನು ಬರೆದಿದ್ರು. ಈ ಪತ್ರದಿಂದಾಗಿಯೇ ತಾವು ಸಾಮಾಜಿಕ ಜಾಲತಾಣದಲ್ಲಿ ಇಷ್ಟು ಚರ್ಚೆಗೆ ಗ್ರಾಸವಾಗಬಹುದು ಅನ್ನೋ ಕಲ್ಪನೆ ಕೂಡ ಅವರಿಗೆ ಇರಲಿಲ್ಲ.

ಅಷ್ಟಕ್ಕೂ ಕುಮಾರ್ ಪತ್ರ ಬರೆದಿರೋದು ಯಾವ ವಿಚಾರದ ಬಗ್ಗೆ ಗೊತ್ತಾ? ಬೆಂಕಿ ಪೊಟ್ಟಣವನ್ನು ವಾಪಸ್ ಕೊಡದೇ ಇರುವ ಕುರಿತು. ”ಸೊಳ್ಳೆ ಕಾಯಿಲ್ ಬಳಿ ಇಟ್ಟಿದ್ದ ಬೆಂಕಿಪೆಟ್ಟಿಗೆಯನ್ನು ಜನವರಿ 23ರಂದು ಪಡೆದಿದ್ದೀರಾ. ಅದರಲ್ಲಿ 19 ಬೆಂಕಿಕಡ್ಡಿಗಳಿತ್ತು. ವಿಷಾದದ ಸಂಗತಿ ಅಂದ್ರೆ ಒಂದು ವಾರವಾದ್ರೂ ಬೆಂಕಿಪೆಟ್ಟಿಗೆಯನ್ನು ನೀವು ಹಿಂದಿರುಗಿಸಿಲ್ಲ. ಇದರಿಂದ ಕಚೇರಿ ಸಿಬ್ಬಂದಿಗೆ ಸಹಿಸಲಾಗದಷ್ಟು ತೊಂದರೆಯಾಗ್ತಿದೆ.

ಇನ್ನು 3 ದಿನಗಳೊಳಗಾಗಿ ಬೆಂಕಿಪೊಟ್ಟಣವನ್ನು ಹಿಂದಿರುಗಿಸಿ. ಈ ವಿವಾದದಿಂದ ಯಾವುದೇ ಸಂಘರ್ಷದ ಸ್ಥಿತಿ ಉದ್ಭವಿಸಬಾರದು. ಕೆಲಸಗಾರರ ಪರಸ್ಪರ ನಂಬಿಕೆಯನ್ನು ಪುನರ್ ಸ್ಥಾಪಿಸಬೇಕು. ಹಾಗೆ ಆಗದೇ ಇದ್ದಲ್ಲಿ ನಿಮ್ಮ ಮೇಲೆ ಕೈಗೊಳ್ಳುವ ಅಧಿಕೃತ ಕ್ರಮಕ್ಕೆ ನೀವೇ ಜವಾಬ್ಧಾರರಾಗಿರುತ್ತೀರಿ’’ ಅಂತಾ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಈ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಧಿಕೃತ ಪತ್ರ ಹೇಗಿರಬೇಕು ಅನ್ನೋದಕ್ಕೆ ಸುಶೀಲ್ ಈ ಪತ್ರವನ್ನು ಬರೆದಿದ್ರು. ಅದನ್ನು ಸಹೋದ್ಯೋಗಿಗೆ ಕೊಡುವ ಉದ್ದೇಶ ಇರಲಿಲ್ಲ. ಆದ್ರೆ ಯಾರೋ ಇದರ ಫೋಟೋ ಹೊಡೆದು ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...