alex Certify
ಕನ್ನಡ ದುನಿಯಾ       Mobile App
       

Kannada Duniya

ಸನ್ನಿ ವಿರುದ್ದ ದಾಖಲಾಯ್ತು ಕೇಸ್ !

sunny-leone_story_647_020916105150

ತನ್ನ ಹಾಟ್ ಅಭಿನಯದ ಮೂಲಕವೇ ಅಭಿಮಾನಿಗಳ ನಿದ್ದೆ ಕದ್ದಿರುವ ‘ನೀಲಿ ಚಿತ್ರ’ಗಳ ಮಾಜಿ ತಾರೆ ಸನ್ನಿಲಿಯೋನ್ ವಿರುದ್ಧ ಇದೀಗ ಮತ್ತೊಂದು ದೂರು ದಾಖಲಾಗಿದ್ದು, ಮತ್ತೆ ಭಾರತೀಯ ಚಿತ್ರರಂಗದಲ್ಲಿ ಅವಕಾಶಕ್ಕಾಗಿ ಕಾಯುತ್ತಿರುವ ಸನ್ನಿಗೆ ಮತ್ತೊಂದು ಸಂಕಷ್ಟ ಎದುರಾದಂತಾಗಿದೆ.

ಹೌದು. ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ‘ಮಸ್ತಿಜಾದೆ’ ಚಿತ್ರದಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುವ ಸನ್ನಿವೇಶಗಳಿವೆ ಎಂದು ಆರೋಪಿಸಿ ನಟಿ ಸನ್ನಿ ಲಿಯೋನ್ ಹಾಗೂ ವೀರ್ ದಾಸ್ ಮತ್ತು ಚಿತ್ರ ನಿರ್ದೇಶಕ ಮಿಲಾಪ್ ಜವೇರಿ ವಿರುದ್ಧ ದೆಹಲಿಯ ಆದರ್ಶ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕುತೂಹಲಕ್ಕೆ ಕಾರಣವಾಗಿದೆ.

ಸ್ಥಳೀಯ ವ್ಯಕ್ತಿಯೊಬ್ಬರು ಈ ಪ್ರಕರಣ ದಾಖಲಿಸಿದ್ದಾರೆ ಎನ್ನಲಾಗಿದ್ದು, ತಮ್ಮ ದೂರಿನಲ್ಲಿ ದೇವಾಲಯದಲ್ಲಿ ಕಾಂಡೋಮ್ ಬಳಕೆ ಮಾಡುವ ಕುರಿತಂತೆ ‘ಮಸ್ತಿಜಾದೆ’ ಚಿತ್ರದಲ್ಲಿ ಅಸಭ್ಯವಾಗಿ ಚಿತ್ರಿಸಲಾಗಿದ್ದು, ಇದರಿಂದ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗಿದೆ. ಹಾಗಾಗಿ ಸನ್ನಿ ಸೇರಿದಂತೆ ನಿರ್ದೇಶಕರ ವಿರುದ್ದ ಕ್ರಮ ತೆಗೆದುಕೊಳ್ಳಬೇಕು ಎಂದು ದೂರುದಾರರು ಮನವಿ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...