alex Certify
ಕನ್ನಡ ದುನಿಯಾ       Mobile App
       

Kannada Duniya

ಚೆನ್ನೈನಲ್ಲಿ ತಪ್ಪಿದೆ ಭಾರೀ ಅನಾಹುತ

bus

ಚೆನ್ನೈನ ಅಣ್ಣಾ ಸಲೈನಲ್ಲಿ ಭಾರೀ ಅನಾಹುತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ. ಬಸ್ ನಲ್ಲಿದ್ದ 35 ಪ್ರಯಾಣಿಕರು ಅದೃಷ್ಟವಶಾತ್ ಪಾರಾಗಿದ್ದಾರೆ. ಅಣ್ಣಾಸಲೈ ಚೆನ್ನೈನ ಅತ್ಯಂತ ಬ್ಯುಸಿ ರಸ್ತೆಗಳಲ್ಲೊಂದು. ಪ್ರತಿನಿತ್ಯ ಸಾವಿರಾರು ವಾಹನಗಳು ಇಲ್ಲಿ ಸಂಚರಿಸುತ್ತವೆ.

ಇವತ್ತು ಇದ್ದಕ್ಕಿದ್ದಂತೆ ರಸ್ತೆ ಕುಸಿದು ದೊಡ್ಡದೊಂದು ಗುಹೆಯೇ ನಿರ್ಮಾಣವಾಗಿಬಿಟ್ಟಿತ್ತು. ಇದೇ ರಸ್ತೆಯಲ್ಲಿ ಬರ್ತಾ ಇದ್ದ ಬಸ್ ಹಾಗೂ ಕಾರು ದಿಢೀರನೆ ರಸ್ತೆ ಕುಸಿದಿದ್ರಿಂದ ಆ ಪ್ರಪಾತದೊಳಕ್ಕೆ ಬಿದ್ದಿವೆ. ಕೂಡಲೇ ಬಸ್ ಹಾಗೂ ಕಾರಿನಲ್ಲಿದ್ದ ಪ್ರಯಾಣಿಕರನ್ನೆಲ್ಲ ಸುರಕ್ಷಿತವಾಗಿ ಮೇಲಕ್ಕೆತ್ತಲಾಯ್ತು.

ಥೌಸಂಡ್ ಲೈಟ್ಸ್ ಹಾಗೂ AG-DMS ನಡುವೆ ಮೆಟ್ರೋ ಸುರಂಗ ಮಾರ್ಗ ನಿರ್ಮಾಣ ಕಾರ್ಯ ನಡೆಯುತ್ತಿದೆ. ಈ ಕಾಮಗಾರಿಯಿಂದ ಮಣ್ಣು ಸಡಿಲಗೊಂಡಿದ್ದು, ಈ ರೀತಿ ರಸ್ತೆಯಲ್ಲಿ ಹೊಂಡ ಬೀಳಲು ಕಾರಣವಾಯ್ತು ಅಂತಾ ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ಮಾರ್ಚ್ 30ರಂದು ಕೂಡ ಇದೇ ರಸ್ತೆ ಕುಸಿದಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...