alex Certify
ಕನ್ನಡ ದುನಿಯಾ       Mobile App
       

Kannada Duniya

ಮಸಾಜ್ ವೇಳೆ ಅಶ್ಲೀಲ ಫೋಟೋ ಕ್ಲಿಕ್ಕಿಸಿ ಬ್ಲಾಕ್ಮೇಲ್ ಮಾಡ್ತಿದ್ಲು ಮಹಿಳೆ

ಎನ್ಸಿಆರ್ ನ ಹೊಟೇಲ್ ಒಂದರಲ್ಲಿ ಮಸಾಜ್ ಹೆಸರಿನಲ್ಲಿ ಅಶ್ಲೀಲ ಫೋಟೋ ತೆಗೆದು ಬ್ಲಾಕ್ಮೇಲ್ ಮಾಡ್ತಿದ್ದ ಘಟನೆ ಬೆಳಕಿಗೆ ಬಂದಿದೆ. ಆರೋಪಿ ಆನ್ಲೈನ್ ನಲ್ಲಿ ಜಾಹೀರಾತು ನೀಡ್ತಿದ್ದರು. ಮಸಾಜ್ ಗೆ ಬಂದವರ ಫೋಟೋ ತೆಗೆದು ಹಣ ನೀಡುವಂತೆ ಬ್ಲಾಕ್ಮೇಲ್ ಮಾಡ್ತಿದ್ದರು.

ಮಸಾಜ್ ಸೆಂಟರ್ ನಲ್ಲಿ ಅಶ್ಲೀಲ ಫೋಟೋ ಕ್ಲಿಕ್ಕಿಸಿ ಹಣ ವಸೂಲಿ ಮಾಡ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 25 ವರ್ಷದ ಆರೋಪಿ ಹಾಗೂ ಆತನ ಗೆಳತಿಯನ್ನು ಪೊಲೀಸರು ಬಂಧಿಸಿದ್ದಾರೆ. ಪೀಡಿತನೊಬ್ಬ ಬುಧವಾರ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ದೂರು ದಾಖಲಿಸಿದ್ದ. ಅಶ್ಲೀಲ ಫೋಟೋ ತೋರಿಸಿ 3 ಲಕ್ಷ ನೀಡುವಂತೆ ಬ್ಲಾಕ್ಮೇಲ್ ಮಾಡ್ತಿದ್ದಾರೆಂದು ಆರೋಪ ಮಾಡಿದ್ದ.

ಮಸಾಜ್ ಗಾಗಿ 12 ಸಾವಿರ ನೀಡುವಂತೆ ಆರೋಪಿ ಹೇಳಿದ್ದಾನೆ. ವೈಶಾಲಿ ಹೊಟೇಲ್ ಗೆ ಕರೆದು ಒಂದು ದಿನ ಮಸಾಜ್ ಮಾಡಿದ್ದಾನೆ. ಒಂದು ತಿಂಗಳ ಅಂತರದಲ್ಲಿ ಮತ್ತೆ ಹೊಟೇಲ್ ಗೆ ಕರೆದಿದ್ದಾನೆ. ಈ ವೇಳೆ ಆತನ ಜೊತೆ ಇಬ್ಬರು ಮಹಿಳೆಯರು ಇದ್ದರು ಎನ್ನಲಾಗಿದೆ. ಮಹಿಳೆಯರು ಬಟ್ಟೆ ಹರಿದುಕೊಂಡು ಅತ್ಯಾಚಾರದ ದೂರು ನೀಡುವುದಾಗಿ ಬೆದರಿಸಿದ್ದಾರೆ. 10 ಲಕ್ಷ ನೀಡುವಂತೆ ಬ್ಲಾಕ್ಮೇಲ್ ಮಾಡಿದ್ದಾರೆ. ಪೀಡಿತ ಮೂರು ಲಕ್ಷ ರೂಪಾಯಿಯನ್ನು ಮಹಿಳೆಗೆ ನೀಡಿದ್ದ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...