alex Certify
ಕನ್ನಡ ದುನಿಯಾ       Mobile App
       

Kannada Duniya

ಗ್ರಾಹಕರಿಗೆ ಶಾಕ್ ನೀಡಿದ ಮಾರುತಿ ಸುಜುಕಿ

cars-generic-827_827x510_71452519603

ಕೇಂದ್ರ ಸರ್ಕಾರ ಬಜೆಟ್ ನಲ್ಲಿ ಆಟೋಮೊಬೈಲ್ ​ಗಳ ಮೇಲೆ ಸೆಸ್ ಹೆಚ್ಚಿಸುತ್ತಿದ್ದಂತೆ ದೇಶದ ಅತಿ ದೊಡ್ಡ ಕಾರು ತಯಾರಕ ಕಂಪೆನಿ ಮಾರುತಿ ಸುಜುಕಿ ತನ್ನ ಕಾರುಗಳ ಬೆಲೆಯನ್ನು ಸುಮಾರು 34,494 ರೂಪಾಯಿಗಳಷ್ಟು ಏರಿಸುವ ಮೂಲಕ ಗ್ರಾಹಕರಿಗೆ ಶಾಕ್ ನೀಡಿದೆ.

ಹೌದು. 2016-17 ರ ಕೇಂದ್ರ ಮುಂಗಡಪತ್ರ ಮಂಡಿಸಿದ್ದ ವಿತ್ತ ಸಚಿವ ಅರುಣ್ ಜೇಟ್ಲಿ ಆಟೋಮೊಬೈಲ್​ ಗಳ ಮೇಲೆ ಮೂಲ ಸವಲತ್ತು ತೆರಿಗೆಯನ್ನು ಹೆಚ್ಚಿಸುವ ಮೂಲಕ ಬೊಕ್ಕಸ ಭರ್ತಿಗೆ ಮುಂದಾಗಿದ್ದರು. ಈ ತೆರಿಗೆಯನ್ನು ಸರಿದೂಗಿಸಿಕೊಳ್ಳುವ ನಿಟ್ಟಿನಲ್ಲಿ ಮಾರುತಿ ಸುಜುಕಿ ತನ್ನ ವಿವಿಧ ಮಾಡೆಲ್ ​ಕಾರುಗಳ ಬೆಲೆಯನ್ನು 1,441 ರಿಂದ 34,494 ರೂಪಾಯಿಗಳವರೆಗೆ ಏರಿಸಿದೆ.

ಆದರೂ ಸಹ ತನ್ನ ಸಿಯಝ್, ಎರ್ಟಿಗಾ ಹಾಗೂ ಎಸ್ ​ಎಚ್ ​ವಿ ಎಸ್ ಮಾಡೆಲ್​ಗಳಿಗೆ ಮೂಲ ಸವಲತ್ತು ತೆರಿಗೆಯಿಂದ ವಿನಾಯ್ತಿ ನೀಡಲಾಗಿದ್ದು, ಹಾಗಾಗಿ ಈ ಮಾಡೆಲ್ ​ಗಳು ಹಿಂದಿನ ಬೆಲೆಯಲ್ಲಿಯೇ ಲಭಿಸಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...