alex Certify
ಕನ್ನಡ ದುನಿಯಾ       Mobile App
       

Kannada Duniya

15 ವರ್ಷದ ಹುಡುಗನ ಜೊತೆ ಓಡಿ ಹೋದ್ಲು 2 ಮಕ್ಕಳ ತಾಯಿ

ಗುರುಗ್ರಾಮ್ ನಲ್ಲಿ 26 ವರ್ಷದ ಮಹಿಳೆಯೊಬ್ಬಳು 15 ವರ್ಷದ ಹುಡುಗನ ಜೊತೆ ಓಡಿ ಹೋಗಿದ್ದಾಳೆ. ಮಹಿಳೆ ಎರಡು ಮಕ್ಕಳ ತಾಯಿ. ಇಬ್ಬರೂ ಟೆಂಟ್ ಹೌಸ್ ನಲ್ಲಿ ಕೆಲಸ ಮಾಡ್ತಿದ್ದರು ಎನ್ನಲಾಗಿದೆ. ಶೀತಲಾ ಕಾಲೋನಿಯಲ್ಲಿ ಪತಿ, ನಾಲ್ಕು ವರ್ಷದ ಮಗ ಹಾಗೂ 2 ವರ್ಷದ ಮಗಳ ಜೊತೆ ವಾಸವಾಗಿದ್ದ ಮಹಿಳೆ ಅದೇ ಕಾಲೋನಿ ಹುಡುಗನ ಜೊತೆ ಓಡಿ ಹೋಗಿದ್ದಾಳೆ.

ಮಹಿಳೆ ಪತಿ ಹಾಗೂ ಹುಡುಗನ ಚಿಕ್ಕಪ್ಪ ಇಬ್ಬರೂ ಬೇರೆ ಬೇರೆ ದೂರು ನೀಡಿದ್ದಾರೆ. ಏಪ್ರಿಲ್ 12ರಿಂದ ಮಹಿಳೆ ನಾಪತ್ತೆಯಾಗಿದ್ದಾಳೆ. ಏಪ್ರಿಲ್ 22ರಂದು ಹುಡುಗ ನಾಪತ್ತೆಯಾಗಿದ್ದಾನೆ. ಇಬ್ಬರೂ ಒಂದೇ ಟೆಂಟ್ ಹೌಸ್ ನಲ್ಲಿ ಕೆಲಸ ಮಾಡ್ತಿದ್ದರು ಎನ್ನಲಾಗಿದೆ. ಕುಟುಂಬಸ್ಥರಿಗೆ ದಾರಿ ತಪ್ಪಿಸಲು 10 ದಿನ ಬಿಟ್ಟು ಹುಡುಗ ಓಡಿ ಹೋಗಿದ್ದಾನೆ ಎಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ.

ಟೆಂಟ್ ಹೌಸ್ ಇಬ್ಬರ ನಡುವೆ ಆಪ್ತತೆ ಹೆಚ್ಚಿತ್ತು ಎಂದಿದೆ. ಪ್ರಕರಣ ದಾಖಲಿಸಿಕೊಂಡು ಪೊಲೀಸರು ಜೋಡಿ ಹುಡುಕಾಟ ನಡೆಸುತ್ತಲೇ ಇದ್ದಾರೆ. ಆದ್ರೆ ಈವರೆಗೂ ಇಬ್ಬರ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ.

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...