alex Certify
ಕನ್ನಡ ದುನಿಯಾ       Mobile App
       

Kannada Duniya

ವೈದ್ಯೆಯಾಗುವ ಹಾದಿಯಲ್ಲಿ ಬಾಲ್ಯ ವಿವಾಹವಾದಾಕೆ….

rupaರಾಜಸ್ಥಾನದ ರೂಪಾ ಕೇವಲ 8 ವರ್ಷದವಳಾಗಿದ್ದಾಗಲೇ 12 ವರ್ಷದ ಶಂಕರ್ ಲಾಲ್ ಯಾದವ್ ಜೊತೆ ಬಾಲ್ಯ ವಿವಾಹವಾಗಿದ್ದಳು. ವಿವಾಹದ ಸಂದರ್ಭದಲ್ಲಿ ಮೂರನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ರೂಪಾಳ ಕಲಿಕೆಯ ಆಸಕ್ತಿಯನ್ನು ಗಮನಿಸಿದ್ದ ವರನ ಕಡೆಯವರು ಆಕೆಯ ಮುಂದಿನ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡಿದ ಕಾರಣ ಆಕೆ ಇಂದು ವೈದ್ಯೆಯಾಗುವ ಹಾದಿಯಲ್ಲಿದ್ದಾಳೆ.

ರೂಪಾಳ ಪತಿ ಶಂಕರ್ ಲಾಲ್ ಯಾದವ್ ಮತ್ತಾತನ ಮನೆಯವರು ಆರ್ಥಿಕವಾಗಿ ಸ್ಥಿತಿವಂತರಲ್ಲದಿದ್ದರೂ ರೂಪಾಳ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಟ್ಟಿದ್ದು, ಇದರಿಂದಾಗಿ ಇತ್ತೀಚೆಗೆ ನಡೆದ ನೀಟ್ ಪರೀಕ್ಷೆಯಲ್ಲಿ ರೂಪಾ 603 ನೇ ರ್ಯಾಂಕ್ ಗಳಿಸಿದ್ದಾಳೆ. ವೈದ್ಯೆಯಾಗುವ ಬಯಕೆ ಹೊಂದಿದ್ದ ರೂಪಾಳಿಗೆ ಈಗ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಸೀಟ್ ಸಿಗುವುದೂ ಖಾತರಿಯಾಗಿದೆ.

10 ನೇ ತರಗತಿಯಲ್ಲಿ ಶೇ.84 ಅಂಕ ಗಳಿಸಿದ್ದ ರೂಪಾ 12 ನೇ ತರಗತಿ ಪರೀಕ್ಷೆಯಲ್ಲೂ ಶೇ.84 ಅಂಕ ಪಡೆದಿದ್ದಾರೆ. ವೈದ್ಯೆಯಾಗಬೇಕೆಂಬ ಕಾರಣಕ್ಕೆ ನೀಟ್ ಪರೀಕ್ಷೆಗಾಗಿ ತರಬೇತಿ ಪಡೆಯಲು ಕೋಟಾದ ಕೋಚಿಂಗ್ ಸೆಂಟರ್ ಸೇರಲು ಬಯಸಿದ್ದು, ಆದರೆ ದುಬಾರಿ ಶುಲ್ಕದ ಕಾರಣಕ್ಕೆ ಹಿಂದೇಟು ಹಾಕಿದ್ದರು. ಆದರೆ ರೂಪಾಳ ಕಲಿಕೆ ಉತ್ಸಾಹ ಗಮನಿಸಿದ ಕೋಚಿಂಗ್ ಸೆಂಟರ್ ನವರು ಶೇ.75 ರಷ್ಟು ಶುಲ್ಕ ಮನ್ನಾ ಮಾಡಿದ್ದಾರೆ. ಇದೀಗ ವೈದ್ಯಕೀಯ ಸೀಟು ಪಡೆಯಲಿರುವ ರೂಪಾರ ಕಾಲೇಜ್ ಶುಲ್ಕವನ್ನು ಭರಿಸಲು ಪ್ರತಿ ತಿಂಗಳು ಸ್ಕಾಲರ್ ಶಿಪ್ ನೀಡಲು ಕೋಚಿಂಗ್ ಸೆಂಟರ್ ನವರು ಮುಂದಾಗಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...