alex Certify
ಕನ್ನಡ ದುನಿಯಾ       Mobile App
       

Kannada Duniya

ಪತ್ನಿ ಬಿಟ್ಟು ಪಕ್ಕದ ಮನೆ ಆಂಟಿ ಜೊತೆ ಪತಿ ಪರಾರಿ

ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿ ಮಹಿಳೆಯೊಬ್ಬಳು ಗಂಡನ ವಿರುದ್ಧ ದೂರು ನೀಡಿದ್ದಾಳೆ. ಪತಿ ಮನೆಯ ಪಕ್ಕದಲ್ಲಿರುವ ಆಂಟಿ ಜೊತೆ ಓಡಿ ಹೋಗಿದ್ದಾನೆಂದು ಆರೋಪ ಮಾಡಿದ್ದಾಳೆ. ಇಬ್ಬರು ಮದುವೆಯಾಗಿದ್ದಾರೆಂದು ಸಂಶಯ ವ್ಯಕ್ತಪಡಿಸಿರುವ ಮಹಿಳೆ ಪತಿಯನ್ನು ವಾಪಸ್ ಕರೆ ತರುವಂತೆ ಪೊಲೀಸರ ಬಳಿ ವಿನಂತಿ ಮಾಡಿದ್ದಾಳೆ.

ಲಕ್ನೋದ ಗೋಮತಿ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. 2007ರಲ್ಲಿ ನಿಧಿ ಹಾಗೂ ಅಭಯ್ ಪರಿಚಯವಾಗಿತ್ತಂತೆ. ಮನೆಯವರ ಒಪ್ಪಿಗೆ ಮೇರೆಗೆ ಮದುವೆ ಮಾಡಿಕೊಂಡಿದ್ದ ಇವರು ಕೆಲಸದ ಕಾರಣ ಬೇರೆ ಬೇರೆ ವಾಸವಾಗಿದ್ದರಂತೆ. ನಂತ್ರ ಲಕ್ನೋಗೆ ವಾಪಸ್ ಬಂದ ಪತಿ ಹೆಚ್ಚಿಗೆ ಓದಲು ನೊಂದ ಮಹಿಳೆ ನಿಧಿ ನೆರವಾಗಿದ್ದಳಂತೆ. ಓದು ಮುಗಿಸಿ ಲಕ್ನೋದಲ್ಲಿ ಕೆಲಸ ಮುಂದುವರೆಸಿದ ಅಭಯ್ ಗೆ 2013ರಲ್ಲಿ ಮುಂದಿನ ಮನೆಯ ಆಂಟಿ ಸೋನಂ ಪರಿಚಯವಾಗಿದೆ.

ಸೋನಂಗೂ ಮದುವೆಯಾಗಿದ್ದು, ಅಭಯ್ ಮನೆಗೆ ಬಂದು ಹೋಗ್ತಿದ್ದಳಂತೆ. ಪತಿ ಸರಿಯಾಗಿಲ್ಲ ವಿಚ್ಛೇದನ ಕೊಡಿಸಿ ಎಂದು ನಿಧಿಗೆ ಸೋನಂ ಹೇಳಿದ್ದಳಂತೆ. ಸೋನಂಗೆ ಸಹಾಯ ಮಾಡಲು ಹೋದ ನಿಧಿ ಈಗ ಅಭಯ್ ಇಲ್ಲದೆ ನೊಂದಿದ್ದಾಳೆ. ವಿಚ್ಛೇದನ ಹೆಸರಲ್ಲಿ ಅಭಯ್ ಹಾಗೂ ಸೋನಂ ಹತ್ತಿರವಾಗಿದ್ದಾರೆ.

2014ರಲ್ಲಿ ಸೋನಂ ಹಾಗೂ ಅಭಯ್ ಒಟ್ಟಿಗೆ ಇರೋದನ್ನು ನೋಡಿದ್ದಳಂತೆ ನಿಧಿ. ಅಭಯ್ ಅಕ್ರಮ ಸಂಬಂಧಕ್ಕೆ ವಿರೋಧ ವ್ಯಕ್ತಪಡಿಸಿದ್ದಳಂತೆ. ಆದ್ರೆ ಪತ್ನಿಗೆ ವಿಚ್ಛೇದನ ನೀಡುವುದಾಗಿ ಬೆದರಿಸಿ ಸೋನಂ ಜೊತೆ ಹೋಗಿರುವ ಅಭಯ್ ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...