alex Certify
ಕನ್ನಡ ದುನಿಯಾ       Mobile App
       

Kannada Duniya

ಮದುವೆಯಾದ ತಪ್ಪಿಗೆ ಕಂಬಕ್ಕೆ ಕಟ್ಟಿ ಮೂತ್ರ ಕುಡಿಸಿದ್ರು

ಮಧ್ಯಪ್ರದೇಶದ ಬುಡಕಟ್ಟು ಪ್ರದೇಶ ಅಲಿರಾಜಪುರದಲ್ಲಿ ಅಮಾನವೀಯ ಘಟನೆ ನಡೆದಿದೆ. ಮದುವೆಯಾದ ನವ ದಂಪತಿಯನ್ನು ಕಂಬಕ್ಕೆ ಕಟ್ಟಿ ಹೊಡೆದಿದ್ದಲ್ಲದೆ ಮೂತ್ರ ಕುಡಿಸಿದ ಘಟನೆ ಬೆಳಕಿಗೆ ಬಂದಿದೆ.

ಘಟನೆ ನಡೆದಿರುವುದು ಅಲಿರಾಜಪುರದ ಹರದಾಸಪುರ ಗ್ರಾಮದಲ್ಲಿ. ಒಂದು ತಿಂಗಳ ಹಿಂದೆ ಗ್ರಾಮದ ಸರ್ಪಂಚ್ ನ ಮಗಳು ಅದೇ ಗ್ರಾಮದ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದಳು. ಗ್ರಾಮದ ಪದ್ಧತಿಯಂತೆ ಪಂಚಾಯತಿ ಸೇರಿತ್ತು. ಅಲ್ಲಿ ನಿರ್ಧಾರ ಬಂದ ನಂತ್ರ ಯುವ ಜೋಡಿ ಕೆಲಸಕ್ಕೆಂದು ಗುಜರಾತಿಗೆ ಹೋಗಿತ್ತು.

ಹಬ್ಬದ ಹಿನ್ನೆಲೆಯಲ್ಲಿ ಜುಲೈ 24ರಂದು ದಂಪತಿ ಗ್ರಾಮಕ್ಕೆ ವಾಪಸ್ ಆಗಿದ್ದಾರೆ. ಇಬ್ಬರೂ ಚಿಕ್ಕಪ್ಪನ ಮನೆಗೆ ಬಂದಿದ್ದರಂತೆ. ಜುಲೈ 25ರ ಬೆಳಿಗ್ಗೆ ಮನೆಗೆ ನುಗ್ಗಿದ ಹುಡುಗಿ ತಂದೆ ಹಾಗೂ ನಾಲ್ವರು, ಹುಡುಗ-ಹುಡುಗಿಯನ್ನು ಮನೆಯಿಂದ ಎಳೆದುಕೊಂಡು ಹೋಗಿ ಕಂಬಕ್ಕೆ ಕಟ್ಟಿ ಹೊಡೆದಿದ್ದಾರೆ. ಹುಡುಗಿ ಕೂದಲು ಕತ್ತರಿಸಿದ್ದಾರೆ. ಒತ್ತಾಯಪೂರ್ವಕವಾಗಿ ಮೂತ್ರ ಕುಡಿಸಿದ್ದಾರೆ. ಈ ಎಲ್ಲ ಘಟನೆಯನ್ನು ಆರೋಪಿಯೊಬ್ಬ ವಿಡಿಯೋ ಮಾಡಿದ್ದಾನೆ. ಘಟನೆ ನಂತ್ರ ವಿಡಿಯೋ ವೈರಲ್ ಆಗಿದೆ. ವಿಡಿಯೋ ವೈರಲ್ ಆದ ನಂತ್ರ ಪೊಲೀಸರು ಕ್ರಮಕ್ಕೆ ಮುಂದಾಗಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...