alex Certify
ಕನ್ನಡ ದುನಿಯಾ       Mobile App
       

Kannada Duniya

ಅತ್ತೆ ಮೆಸೇಜ್ ಓದುವಷ್ಟರಲ್ಲಿ ಹಾರಿಹೋಗಿತ್ತು ಮಗ-ಸೊಸೆಯ ಪ್ರಾಣ

ದೆಹಲಿಯ ಗೋವಿಂದಪುರಿಯಲ್ಲಿರುವ ಫ್ಲಾಟ್ ಒಂದರಲ್ಲಿ ವಿವಾಹಿತ ಜೋಡಿ ಶವವಾಗಿ ಪತ್ತೆಯಾಗಿದ್ದಾರೆ. ದಂಪತಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಅನ್ನೋದು ಪೊಲೀಸರ ಶಂಕೆ. ಆತ್ಮಹತ್ಯೆಗೂ ಮುನ್ನ ಮಹಿಳೆ ತನ್ನ ಅತ್ತೆಗೆ ಮೆಸೇಜ್ ಕೂಡ ಮಾಡಿದ್ದಳು.

ನಾವಿಬ್ಬರೂ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿರುವುದಾಗಿ ಬರೆದಿದ್ದಳು. ಆದ್ರೆ ಅತ್ತೆ ಆ ಮೆಸೇಜ್ ಅನ್ನು ನೋಡಿರಲೇ ಇಲ್ಲ. ಆತ್ಮಹತ್ಯೆಗೆ ಕಾರಣ ಏನು ಅನ್ನೋದನ್ನು ಮೆಸೇಜ್ ನಲ್ಲಿ ಉಲ್ಲೇಖ ಮಾಡಿಲ್ಲ. 28  ವರ್ಷದ ಅರ್ಪಿತಾ ಬಗ್ಗಾ ಹಾಗೂ 30 ವರ್ಷದ ಮೋಹಿತ್ ಬಗ್ಗಾ ಮೃತರು.

2 ವರ್ಷಗಳ ಹಿಂದಷ್ಟೆ ಇವರು ಪ್ರೀತಿಸಿ ಮದುವೆಯಾಗಿದ್ದರು. ವಿವಾಹಕ್ಕೆ ಪೋಷಕರ ಸಮ್ಮತಿಯೂ ಇತ್ತು. ಅರ್ಪಿತಾ ಗೃಹಿಣಿ, ಮೋಹಿತ್ ಸ್ಪೋರ್ಟ್ಸ್ ಈವೆಂಟ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಬೆಳಗಿನ ಜಾವ 4.45ಕ್ಕೆ ಅರ್ಪಿತಾ ತನ್ನ ಅತ್ತೆಗೆ ಮೆಸೇಜ್ ಕಳಿಸಿದ್ದಳು.

ಕೆಲವು ಗಂಟೆಗಳ ಬಳಿಕ ಆಕೆ ಮೆಸೇಜ್ ನೋಡಿ, ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಮನೆಯ ಬಾಗಿಲು ಒಡೆದು ಒಳಪ್ರವೇಶಿಸಿದ್ದಾರೆ. ಅರ್ಪಿತಾಳ ಶವ ನೆಲದ ಮೇಲೆ ಬಿದ್ದಿತ್ತು, ಮೋಹಿತ್ ಶವ ಸೀಲಿಂಗ್ ಗೆ ನೇತಾಡುತ್ತಿತ್ತು.

ಇಬ್ಬರೂ ಒಟ್ಟಿಗೇ ನೇಣು ಹಾಕಿಕೊಂಡಿದ್ದು, ಅರ್ಪಿತಾ ಶವ ನೆಲಕ್ಕೆ ಬಿದ್ದಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಅರ್ಪಿತಾ-ಮೋಹಿತ್ ಮಧ್ಯೆ ಯಾವುದೇ ಭಿನ್ನಾಭಿಪ್ರಾಯವಿರಲಿಲ್ಲ, ಜೊತೆಗೆ ಆರ್ಥಿಕ ಸಮಸ್ಯೆಯೂ ಇರಲಿಲ್ಲ. ಹಾಗಾಗಿ ಈ ಆತ್ಮಹತ್ಯೆಗೆ ಕಾರಣ ಏನು ಅನ್ನೋದು ನಿಗೂಢವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...