alex Certify
ಕನ್ನಡ ದುನಿಯಾ       Mobile App
       

Kannada Duniya

ವಿಚಿತ್ರ ಆದ್ರೂ ನಿಜ ! ನಾಯಿ ಜೊತೆಗೆ ಮದುವೆ !!

JHARKHAND, INDIA - JANUARY 19, 2016: Seven-year-old Mukesh was married off to a bitch to ward off evil spirits in Manik Bazar area of Jharkhand. Pictures Supplied By: Cover Asia Press

ಕೋಲ್ಕತಾ: ಯುವಕ, ಯುವತಿ ಮದುವೆಯಾಗುವುದು ಸಹಜ. ಆದರೆ, ಕೆಲವೊಂದು ಸಂದರ್ಭಗಳಲ್ಲಿ ಅಂದರೆ ಮಳೆ ಬಾರದೇ ಇದ್ದಾಗ, ಕಪ್ಪೆ, ಕತ್ತೆಗಳ ಮದುವೆ ಮಾಡಿರುವುದನ್ನೂ ನೋಡಿದ್ದೇವೆ. ಆದರೆ, ಪಶ್ಚಿಮ ಬಂಗಾಳದಲ್ಲಿ ಬಾಲಕನ ಮದುವೆಯನ್ನು ನಾಯಿಯ ಜೊತೆಗೆ ಮಾಡಲಾಗಿದ್ದು, ಸಖತ್ ಸುದ್ದಿಯಾಗಿದೆ.

ಪಶ್ಚಿಮ ಬಂಗಾಳದ ಮಾಣಿಕ್ ಗಜಾರ್ ಎಂಬ ಗ್ರಾಮದ 7 ವರ್ಷದ ಬಾಲಕ ಮುಖೇಶ್ ಎಂಬುವವನಿಗೆ ಜಾತಕದಲ್ಲಿ ದೋಷವಿದ್ದು, ಆತ ಮದುವೆಯಾದರೆ ಮೊದಲ ಪತ್ನಿ ಸಾಯುತ್ತಾರೆ ಎಂದು ಜ್ಯೋತಿಷಿಗಳು ಹೇಳಿದ್ದಾರೆ. ಇದರಿಂದ ಆತನ ಪೋಷಕರು, ಸಂಬಂಧಿಕರಿಗೆ ಏನು ಮಾಡಬೇಕೆಂಬ ಚಿಂತೆಯಾಗಿದೆ. ಮತ್ತೆ ಜ್ಯೋತಿಷಿಯ ಮೊರೆಹೋಗಿದ್ದು, ಅವರು ನೀಡಿದ ಸಲಹೆಯಂತೆ ನಾಯಿಯ ಜೊತೆಗೆ ಮುಖೇಶ್ ಮದುವೆ ಮಾಡಲು ತೀರ್ಮಾನಿಸಿದ್ದಾರೆ. ಅದರಂತೆ ಮುಖೇಶ್ ಮದುವೆಯನ್ನು ಶಾಸ್ತ್ರೋಕ್ತವಾಗಿ ಮಾಡಿದ್ದಾರೆ ಎಂದು ಹೇಳಲಾಗಿದೆ.

ಮುಖೇಶ್ ಹಾಗೂ ನಾಯಿಯನ್ನು ಮಧುಮಗ, ಮಧುವಣಗಿತ್ತಿಯಂತೆ ಕೂರಿಸಿ ಇಡೀ ಗ್ರಾಮದವರು ಬಂಧು- ಬಳಗದವರನ್ನೆಲ್ಲಾ ಕರೆದು ಜೋರಾಗಿಯೇ ಮದುವೆ ಮಾಡಿದ್ದಾರೆ. ಏನನ್ನು ಅರಿಯದ 7 ವರ್ಷದ ಬಾಲಕ ಮುಖೇಶ್ ತನಗೆ ಮದುವೆಯಾಗುತ್ತಿದೆ ಎಂಬುದನ್ನು ತಿಳಿಯದೇ ನಾಯಿಯ ಜೊತೆಗೆ ಆಟವಾಡುತ್ತಿದ್ದ. ಮದುವೆಗೆ ಬಂದವರು ಅಚ್ಚರಿ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...