alex Certify
ಕನ್ನಡ ದುನಿಯಾ       Mobile App
       

Kannada Duniya

ಹೀಗೆ ಮದುವೆಯಾಗುವ ಆಸೆಯಿದ್ದರೆ ಸ್ವಲ್ಪ ಕಾಯಿರಿ

ship marriage

ಮದುವೆಯ ವಯಸ್ಸಿಗೆ ಬಂದ ಯುವಕ, ಯುವತಿಯರಿಗೆ ತಮ್ಮ ಮದುವೆ ಎಲ್ಲರಿಗಿಂತ ಭಿನ್ನವಾಗಿರಬೇಕೆಂಬ ಸಹಜ ಆಸೆ ಇರುತ್ತದೆ. ಕೆಲವರಂತೂ ನೀರಿನಲ್ಲಿ, ಆಗಸದಲ್ಲಿ, ರೈಲಿನಲ್ಲಿ ಹೀಗೆ ಹಲವಾರು ರೀತಿಯಲ್ಲಿ ಮದುವೆಯಾಗಿ ಗಮನ ಸೆಳೆದಿದ್ದಾರೆ.

ನೀಲಿಯಾಗಿರುವ ಕಡಲ ಮೇಲೆ ಮದುವೆಯಾಗಬೇಕೆಂಬ ಬಯಕೆ ಬಹಳಷ್ಟು ಮಂದಿಗೆ ಇರುತ್ತದೆ. ಅಂತಹವರಿಗಾಗಿಯೇ ವಿಶೇಷ ಯೋಜನೆಯೊಂದನ್ನು ಕೇಂದ್ರ ಸರ್ಕಾರ ರೂಪಿಸುತ್ತಿದೆ. ಕಡಲಿನ ಮೇಲೆ ಐಷಾರಾಮಿ ಹಡಗಿನಲ್ಲಿ ಮದುವೆ ಸಮಾರಂಭ ಆಯೋಜಿಸುವ ಯೋಜನೆಯನ್ನು ರೂಪಿಸಲಾಗಿದೆ. ದೇಶದ ಕರಾವಳಿಯ ಮುಂಬೈ, ಗೋವಾ, ಅಂಡಮಾನ್ ನಿಕೋಬಾರ್ ದ್ವೀಪಗಳಲ್ಲಿ ಮದುವೆ ಸಂಭ್ರಮಕ್ಕಾಗಿಯೇ ಹಡಗುಗಳನ್ನು ಸಿದ್ಧಪಡಿಸಲಾಗುತ್ತದೆ.

ಐಷಾರಾಮಿ ಹಡಗಿನಲ್ಲಿ ಅದ್ಧೂರಿಯಾಗಿ ಮದುವೆ ಸಮಾರಂಭ ಆಯೋಜಿಸುವ ಹಾಗೂ ಇದರೊಂದಿಗೆ ಪ್ರವಾಸೋದ್ಯಮಕ್ಕೂ ಉತ್ತೇಜನ ನೀಡುವ ಬಗ್ಗೆ ಚಿಂತನೆ ಇದೆ ಎಂದು ಕೇಂದ್ರ ಸಾರಿಗೆ ಸಚಿವರಾದ ನಿತಿನ್ ಗಡ್ಕರಿ ಅವರು ತಿಳಿಸಿದ್ದಾರೆ. ಇದು ಜಾರಿಯಾದಲ್ಲಿ ತೇಲುವ ಹಡಗಿನಲ್ಲಿ ಮದುವೆ ಸಂಭ್ರಮ ಆಚರಿಸಬಹುದಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...