alex Certify
ಕನ್ನಡ ದುನಿಯಾ       Mobile App
       

Kannada Duniya

ಅಮ್ಮನ ವಯಸ್ಸಿನ ವಿಧವೆಯೊಂದಿಗೆ ಸರಸ, ಏನಾಯ್ತು ಗೊತ್ತಾ..?

marriage bihar

ಮುಜಾಫರ್ ನಗರ್: ಅಕ್ರಮ ಸಂಬಂಧದ ಕಾರಣದಿಂದ ಏನೆಲ್ಲಾ ಅನಾಹುತಗಳಾಗುತ್ತವೆ ಎಂಬುದನ್ನು ಹಲವು ಪ್ರಕರಣಗಳಲ್ಲಿ ನೋಡಿರುತ್ತೀರಿ. ಕೆಲವೊಮ್ಮೆ ಅನಾಹುತಕ್ಕೆ ಬದಲಾಗಿ ಮದುವೆಯೂ ಆಗುತ್ತದೆ ಎಂಬುದಕ್ಕೆ ಇಲ್ಲಿದೆ ನೋಡಿ ಉದಾಹರಣೆ.

ಯುವಕನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ವಿಧವೆಯೊಬ್ಬಳ ಮದುವೆಯನ್ನು ಗ್ರಾಮಸ್ಥರೇ ಮುಂದೆ ನಿಂತು ಮಾಡಿದ ಘಟನೆ ಬಿಹಾರದಲ್ಲಿ ನಡೆದಿದೆ. 60 ವರ್ಷ ವಯಸ್ಸಿನ ವಿಧವೆ ಸುಶೀಲಾ ಹಾಗೂ 32 ವರ್ಷದ ತರುಣ ಸುಶೀಲ್ ಕುಮಾರ್ ನಡುವೆ ಪ್ರೇಮಾಂಕುರವಾಗಿದ್ದು, ಇವರಿಬ್ಬರು ಸಮಾಜಕ್ಕೆ ಹೆದರಿ ಕದ್ದುಮುಚ್ಚಿ ಸೇರುತ್ತಿದ್ದರು. ಇವರ ಸಂಬಂಧ ಅಧಿಕೃತಗೊಳಿಸಲು ಪಂಚಾಯಿತಿಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಸ್ಥಳೀಯ ಪಂಚಾಯಿತಿ ಸದಸ್ಯೆಯಾಗಿದ್ದ ಸುನೀತಾ ಕುಮಾರಿ ಮುಂದೆ ನಿಂತು ಇವರಿಬ್ಬರಿಗೂ ಮದುವೆ ಮಾಡಿಸಿದ್ದಾರೆ.

ಬೀಡಾ ಅಂಗಡಿ ನಡೆಸುತ್ತಿರುವ ಸುಶೀಲ್ ಕುಮಾರ್ ಗೆ ಈಗಾಗಲೇ ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಹೀಗಿದ್ದರೂ, ಸುಶೀಲಾ ಅವರೊಂದಿಗೆ ಕದ್ದುಮುಚ್ಚಿ ಜೀವನ ನಡೆಸುತ್ತಿದ್ದ. ಇದೀಗ ಗ್ರಾಮಸ್ಥರೇ ಮುಂದೆ ನಿಂತು ಮದುವೆ ಮಾಡಿಸಿದ್ದಾರೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...