alex Certify
ಕನ್ನಡ ದುನಿಯಾ       Mobile App
       

Kannada Duniya

ಫುಲ್ ಟೈಟಾದ ವರ, ವಧುವಿನ ಬದಲು ಮತ್ತೊಬ್ಬಾಕೆಗೆ ತಾಳಿ ಕಟ್ಟಲು ಮುಂದಾದ

marriage18 mn

ಕೆಲ ಯುವಕರು ಮದ್ಯ ಸೇವನೆ ಮಾಡುವುದು ಈಗಂತೂ ಸಾಮಾನ್ಯವಾಗಿಬಿಟ್ಟಿದೆ. ಅದರಲ್ಲಿಯೂ ಪ್ರಮುಖ ಸಂದರ್ಭಗಳಲ್ಲಿ ಮದ್ಯ ಕುಡಿಯುವುದನ್ನು ಪ್ರತಿಷ್ಟೆಯ ಪ್ರಶ್ನೆಯನ್ನಾಗಿಸಿಕೊಳ್ಳುತ್ತಾರೆ. ಹೀಗೆ ಎಣ್ಣೆ ಹೊಡೆದ ಮತ್ತಿನಲ್ಲಿ ಕೆಲವರು ಹೇಗೆಲ್ಲಾ ಅವಾಂತರ ಸೃಷ್ಠಿಸಿರುತ್ತಾರೆ ಎಂಬುದನ್ನು ನೋಡಿರುತ್ತೀರಿ.

ಉತ್ತರ ಪ್ರದೇಶದ ಮಥುರಾದಲ್ಲಿ ಮದುವೆ ಮಂಟಪಕ್ಕೆ ಬರುವಾಗಲೇ ಫುಲ್ ಟೈಟ್ ಆಗಿದ್ದ ವರ, ವಧುವಿನೊಂದಿಗೆ ಮದುವೆಯಾಗಲ್ಲ, ಆಕೆಯ ಬದಲಿಗೆ ಬೇರೆಯವರಿಗೆ ತಾಳಿ ಕಟ್ಟುತ್ತೇನೆ. ಮದುವೆಗೆ ಬಂದಿರುವವರಲ್ಲಿ ಒಬ್ಬ ಯುವತಿಯನ್ನು ಮದುವೆಯಾಗುತ್ತೇನೆ ಎಂದು ವರಾತ ತೆಗೆದಿದ್ದಾನೆ. ಮದುವೆ ಎಂದ ಮೇಲೆ ಸಡಗರ, ಸಂಭ್ರಮ ಜಾಸ್ತಿ ಇರುತ್ತದೆ. ಹೀಗೆ, ಮದುವೆಗೆ ಬಂದಿದ್ದ ಸ್ನೇಹಿತರೊಂದಿಗೆ ಮನೆಯಲ್ಲಿ ಮದ್ಯ ಸೇವಿಸಿದ ವರ ತೂರಾಡುತ್ತಲೇ ಮಂಟಪಕ್ಕೆ ಬಂದಿದ್ದಾನೆ.

ಮದುವೆಗೆ ಎಲ್ಲಾ ಸಿದ್ಧತೆ ನಡೆದು, ಇನ್ನೇನು ಹಸೆಮಣೆ ಏರಬೇಕು ಎನ್ನುವಷ್ಟರಲ್ಲಿ ಗಲಾಟೆ ಶುರು ಮಾಡಿ, ವಧುವಿನ ಬದಲು ಬೇರೆ ಹುಡುಗಿಗೆ ತಾಳಿ ಕಟ್ಟುತ್ತೇನೆ ಎಂದು ಹೇಳಿದ್ದಾನೆ. ಈ ಕುಡುಕನ ವರ್ತನೆಗೆ ಬೇಸರಗೊಂಡ ವಧು, ವರನಿಗೆ ಛೀಮಾರಿ ಹಾಕಿ ಮಂಟಪದಿಂದ ಹೊರನಡೆದಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...