alex Certify
ಕನ್ನಡ ದುನಿಯಾ       Mobile App
       

Kannada Duniya

ದಾಂಪತ್ಯದಲ್ಲಿನ ದೌರ್ಜನ್ಯದ ಬಗ್ಗೆ ಕೋರ್ಟ್ ಹೇಳಿದ್ದೇನು ?

ದೆಹಲಿ ಹೈಕೋರ್ಟ್ ಪ್ರಕರಣವೊಂದರ ವಿಚಾರಣೆಯಲ್ಲಿ ದಾಂಪತ್ಯದಲ್ಲಿನ ಲೈಂಗಿಕ ದೌರ್ಜನ್ಯದ ಬಗ್ಗೆ ಮಹತ್ವದ ಹೇಳಿಕೆಯೊಂದನ್ನ ನೀಡಿದೆ. ಮದುವೆಯ ನಂತರದಲ್ಲಿನ ಲೈಂಗಿಕ ಸಂಪರ್ಕ ಬೇಡ ಎನ್ನುವ ವಿಚಾರದಲ್ಲಿ ಪುರುಷ ಮತ್ತು ಸ್ತ್ರೀಗೆ ಸಮಾನ ಅವಕಾಶಗಳಿವೆ ಅಂತ ಕೋರ್ಟ್ ಅಭಿಪ್ರಾಯ ಪಟ್ಟಿದೆ.

ಮದುವೆಯ ನಂತರ ಒಪ್ಪಿಗೆ ಇಲ್ಲದೆ ನಡೆಯುವಂತಾ ಲೈಂಗಿಕ ಸಂಪರ್ಕವನ್ನು ಅಪರಾಧ ಎಂದು ಘೋಷಿಸುವ ಸಂಬಂಧ ಎನ್ಜಿಓ ಸಲ್ಲಿಸಿದ್ದ ಅರ್ಜಿಯೊಂದರ ವಿಚಾರಣೆಯನ್ನ ದೆಹಲಿ ಹೈಕೋರ್ಟ್ ನ ದ್ವಿಸದಸ್ಯ ಪೀಠ ಕೈಗೆತ್ತಿಕೊಂಡಿತ್ತು. ಎನ್ಜಿಓ ಸಲ್ಲಿಸಿದ್ದ ಅರ್ಜಿಗೆ ಪ್ರತಿಯಾಗಿ ಪುರುಷ ವೇದಿಕೆ ಪ್ರತಿವಾದವನ್ನು ಮಾಡಿತ್ತು. ಇಬ್ಬರ ವಾದವನ್ನು ಆಲಿಸಿದ ಕೋರ್ಟ್ ಮದುವೆಯಾದ ಮಾತ್ರಕ್ಕೆ ಸ್ತ್ರೀಯರು ಲೈಂಗಿಕತೆಗೆ ಸಿದ್ಧರಿದ್ದಾರೆ ಅಂತ ಪುರುಷರು ಭಾವಿಸಬೇಡಿ. ಮದುವೆಯಾದ ತಕ್ಷಣ ಅವರು ನಮ್ಮ ಆಸ್ತಿ ಎಂಬಂತೆ ಅಂದುಕೊಂಡು ಬಲವಂತದ ಸೆಕ್ಸ್ ಗೆ ಒತ್ತಾಯ ಮಾಡುವಂತಿಲ್ಲ ಎಂದು ಕೋರ್ಟ್ ಹೇಳಿದೆ.

ಹಾಗೆ ಕಾನೂನಿನಲ್ಲಿ ಮಹಿಳೆಯರ ಪರವಾಗಿರುವ ಕೆಲ ಕಾಯ್ದೆಗಳನ್ನ ಮಹಿಳೆಯರೇ ದುರ್ಬಳಕೆ ಮಾಡಿಕೊಳ್ತಿರೋದನ್ನು ಕೋರ್ಟ್ ಖಂಡಿಸಿದೆ. ಮದುವೆಯ ನಂತರದಲ್ಲಿ ಇಬ್ಬರಿಗೂ ಬಲವಂತದ ಲೈಂಗಿಕ ಸಂಪರ್ಕಕ್ಕೆ ನೋ ಹೇಳುವ ಸಮಾನ ಅಧಿಕಾರವಿದೆ. ಹಾಗಾಗಿ ಎರಡೂ ಕಡೆಯ ವಾದವನ್ನು ಪುರಸ್ಕರಿಸೋಕೆ ಸಾಧ್ಯವಿಲ್ಲ ಅಂತ ಕೊರ್ಟ್ ಹೇಳಿದೆ. ಅಲ್ಲದೇ ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಕೋರ್ಟ್ ಆಗಸ್ಟ್ 8ಕ್ಕೆ ಮುಂದೂಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...