alex Certify
ಕನ್ನಡ ದುನಿಯಾ       Mobile App
       

Kannada Duniya

ಡೇಟಿಂಗ್ ವೇದಿಕೆಗಳಾಗುತ್ತಿರುವ ವೈವಾಹಿಕ ಜಾಲತಾಣಗಳಿಗೆ ಕಡಿವಾಣ

jala tt

ನವದೆಹಲಿ: ಇತ್ತೀಚೆಗೆ ವೈವಾಹಿಕ ಜಾಲತಾಣಗಳ ದುರ್ಬಳಕೆ ಹೆಚ್ಚಾಗಿದ್ದು, ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ. ಜಾಲತಾಣಗಳಲ್ಲಿ ಕೆಲವು ಬಳಕೆದಾರರು ಸುಳ್ಳು ಮಾಹಿತಿ ನೀಡಿ ದುರುಪಯೋಗಪಡಿಸಿಕೊಂಡಿದ್ದಾರೆ.

ಅಲ್ಲದೇ, ಕೆಲವರು ಅಶ್ಲೀಲ ಬರಹ ಹಾಕುತ್ತಿದ್ದಾರೆ. ಮತ್ತೆ ಕೆಲವರಿಗೆ ಜಾಲತಾಣಗಳು ಡೇಟಿಂಗ್ ವೇದಿಕೆಗಳಾಗಿವೆ. ಇದನ್ನೆಲ್ಲಾ ಮನಗಂಡಿರುವ ಕೇಂದ್ರ ಸರ್ಕಾರ ದುರ್ಬಳಕೆಗೆ ಕಡಿವಾಣ ಹಾಕಲು ಮುಂದಾಗಿದ್ದು. ವೈವಾಹಿಕ ಜಾಲತಾಣ ಕಂಪನಿಗಳು ಇನ್ನು ಮುಂದೆ ಬಳಕೆದಾರರ ಗುರುತಿನ ಚೀಟಿ, ಅಡ್ರೆಸ್ ನೈಜವಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕಿದೆ. ಇದನ್ನು ಕಡ್ಡಾಯ ಮಾಡಲಾಗಿದ್ದು, ಮಾಹಿತಿ ತಂತ್ರಜ್ಞಾನ ಕಾಯ್ದೆ ಪ್ರಕಾರ, ವೈವಾಹಿಕ ಜಾಲತಾಣಗಳು ನಿಯಮ ಪಾಲಿಸಬೇಕಿದೆ ಎಂದು ತಿಳಿಸಲಾಗಿದೆ.

ವೈವಾಹಿಕ ಸೇವೆ ಒದಗಿಸುವ ತಾಣಗಳು ತಮ್ಮ ಬಳಕೆದಾರರಿಗೆ, ನಡೆಯುವ ಮೋಸದ ಬಗ್ಗೆ ಎಚ್ಚರಿಕೆ ನೀಡಬೇಕು. ಬಳಕೆದಾರರ ಉದ್ದೇಶ ಖಚಿತಪಡಿಸಿಕೊಳ್ಳಬೇಕು ಎಂಬ ನಿಯಮಗಳನ್ನು ಜಾರಿಗೆ ತರಲು ಮುಂದಾಗಿದ್ದು, ಇದಕ್ಕೆ ಕೇಂದ್ರ ಮಾಹಿತಿ ತಂತ್ರಜ್ಞಾನ ಮತ್ತು ದೂರ ಸಂಪರ್ಕ ಖಾತೆ ಸಚಿವ ರವಿಶಂಕರ್ ಪ್ರಸಾದ್ ಅನುಮೋದನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...