alex Certify
ಕನ್ನಡ ದುನಿಯಾ       Mobile App
       

Kannada Duniya

ಗಡ್ಡ ಬಿಟ್ಟ ಕೊಹ್ಲಿ ಮದುವೆಯಾಗಬಹುದಾದರೆ ನಾನ್ಯಾಕೆ ಆಗಬಾರದು ಎಂದ ವರ…!

ಮಧ್ಯ ಪ್ರದೇಶದಲ್ಲಿ ನಡೆದಿರುವ ವಿಚಿತ್ರ ವಿವಾಹ ಪ್ರಹಸನವೊಂದು ನಿಮಗೆ ನಗೆಯುಕ್ಕಿಸುತ್ತದೆ. ದಿಬ್ಬಣದೊಂದಿಗೆ ಬಂದ ವರ, ಗಡ್ಡ ಬಿಟ್ಟಿರುವುದನ್ನು ಕಂಡ ವಧುವಿನ ತಂದೆ ಗಡ್ಡ ಬೋಳಿಸುವವರೆಗೂ ಮದುವೆ ಮಾಡಿಕೊಡುವುದಿಲ್ಲವೆಂದು ಪಟ್ಟು ಹಿಡಿದರೆ, ಗಡ್ಡ ಬಿಟ್ಟುಕೊಂಡು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾ ಜೊತೆ ಮದುವೆಯಾಗಬಹುದಾದರೆ ನಾನ್ಯಾಕೆ ಆಗಬಾರದು ಎಂದು ವರ ಮೊಂಡಾಟ ನಡೆಸಿದ್ದಾನೆ. ಕೊನೆಗೆ ಪೊಲೀಸರ ಮಧ್ಯ ಪ್ರವೇಶದಿಂದ ಪ್ರಕರಣ ಸುಖಾಂತ್ಯ ಕಂಡಿದೆ.

ಭೂಪಾಲ್ ನಿಂದ 270 ಕಿ.ಮೀ. ದೂರದಲ್ಲಿರುವ ಖಾಂಡ್ವಾ ಜಿಲ್ಲೆಯ ಅಜಂತಿ ಗ್ರಾಮದಲ್ಲಿ ಸೋಮವಾರದಂದು ಈ ಘಟನೆ ನಡೆದಿದ್ದು, ವರ ಮಂಗಲ್ ಚೌಹ್ಹಾನ್ ವಿವಾಹಕ್ಕೆ ಸಿದ್ದನಾಗಿ ಸಂಬಂಧಿಕರ ಸಮೇತ ದಿಬ್ಬಣದೊಂದಿಗೆ ಬಂದಿದ್ದಾನೆ. ವರ ಮತ್ತಾತನ ಕಡೆಯವರನ್ನು ಸ್ವಾಗತಿಸಿದ ವಧುವಿನ ತಂದೆ ರಾಧೇಶ್ಯಾಮ್ ಜಾಧವ್ ಗೆ ವರ ಗಡ್ಡ ಬಿಟ್ಟಿರುವುದು ಕಂಡಿದೆ. ವಿವಾಹ ಮಾತುಕತೆ ವೇಳೆ ವರ ಗಡ್ಡ ಬಿಟ್ಟಿರಲಿಲ್ಲ. ಈಗ ಗಡ್ಡ ಬಿಟ್ಟುಕೊಂಡಿದ್ದು, ಶೇವ್ ಮಾಡಿಕೊಂಡು ಬರುವವರೆಗೂ ತನ್ನ ಮಗಳು ರೂಪಾಲಿ ಜಾಧವ್ ಳನ್ನು ಮದುವೆ ಮಾಡಿಕೊಡುವುದಿಲ್ಲವೆಂದು ತಕರಾರು ತೆಗೆದಿದ್ದಾನೆ.

ಆದರೆ ಇದಕ್ಕೆ ಆಕ್ಷೇಪಿಸಿದ ವರ, ವಿರಾಟ್ ಕೊಹ್ಲಿಯ ಉದಾಹರಣೆ ಕೊಟ್ಟಿದ್ದಾನೆ. ಆತನ ಪರವಾಗಿ ಸಂಬಂಧಿಕರೂ ವಾದಕ್ಕೆ ನಿಂತಿದ್ದಾರೆ. ರಾತ್ರಿಯಿಡಿ ವಾದ-ವಿವಾದ ನಡೆದರೂ ಸಮಸ್ಯೆ ಬಗೆಹರಿದಿಲ್ಲ. ಕಡೆಗೆ ವರನ ಕಡೆಯವರು ಹೀಗೆ ಮಾಡಿದರೆ ಮದುವೆ ಮಾಡಿಕೊಳ್ಳದೆ ವಾಪಾಸ್ ಹೋಗುವುದಾಗಿ ವಧುವಿನ ತಂದೆಗೆ ಎಚ್ಚರಿಸಿದ್ದಾರೆ. ಈ ಮಧ್ಯೆ ಸಂಬಂಧಿಕರ್ಯಾರೋ ಮೊಗತ್ ರೋಡ್ ಪೊಲೀಸ್ ಠಾಣೆ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಗಡ್ಡ ಬಿಡುವುದು ಒಂದು ಫ್ಯಾಷನ್ ಎಂದು ಹೇಳಿ ವಧುವಿನ ತಂದೆಯ ಮನವೊಲಿಸಲು ಯತ್ನಿಸಿದರೂ ಆತ ಜಪ್ಪಯ್ಯ ಎಂದಿಲ್ಲ. ಕಡೆಗೆ ವರ ಮಂಗಲ್ ಚೌಹ್ಹಾನ್ ಶೇವ್ ಮಾಡಿಸಿಕೊಳ್ಳುವಂತೆ ಒಪ್ಪಿಸಲು ಸಫಲರಾದ ಪೊಲೀಸರು ವಿವಾಹ ಸುಗಮವಾಗಿ ನೆರವೇರುವಂತೆ ಮಾಡಿ ನಿಟ್ಟುಸಿರುಬಿಟ್ಟಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...