alex Certify
ಕನ್ನಡ ದುನಿಯಾ       Mobile App
       

Kannada Duniya

ಮದುವೆಯಲ್ಲಿ ತಲ್ವಾರ್ ಡಾನ್ಸ್ ತಂತು ಆಪತ್ತು

ಮದುವೆ ಸಂಭ್ರಮದಲ್ಲಿದ್ದ ಮನೆ ಏಕಾಏಕಿ ಸ್ಮಶಾನ ಮೌನಕ್ಕೆ ತಿರುಗಿತ್ತು. ಇದಕ್ಕೆ ಕಾರಣವಾಗಿದ್ದು ಒಂದು ತಲ್ವಾರ್. ಮದುವೆ ಮನೆಯಲ್ಲಿ ಡಾನ್ಸ್ ಮಾಡ್ತಿದ್ದ ಯುವಕ ತಲ್ವಾರ್ ನಿಂದ ಸಾವನ್ನಪ್ಪಿದ ಘಟನೆ ನಡೆದಿದೆ.

ಶುಕ್ರವಾರ ಹೈದ್ರಾಬಾದ್ ನ ಶಿಯಕಾಪತ್ ನಲ್ಲಿ ಈ ದುರಂತ ನಡೆದಿದೆ. ಮದುವೆ ಸಂಭ್ರಮದಲ್ಲಿದ್ದ ಎಲ್ಲರೂ ಡಾನ್ಸ್ ಮಾಡ್ತಿದ್ದರು. ಮದ್ಯದ ನಶೆಯಲ್ಲಿದ್ದ ಯುವಕ ದೊಡ್ಡ ತಲ್ವಾರ್ ಹಿಡಿದು ನೃತ್ಯ ಮಾಡಲು ಮುಂದಾಗಿದ್ದಾನೆ.

ಕುಡಿದ ಮತ್ತಿನಲ್ಲಿ ನಿಯಂತ್ರಣ ತಪ್ಪಿದವನು ಕೆಳಗೆ ಬಿದ್ದಿದ್ದಾನೆ. ತಲ್ವಾರ್ ಮೇಲೆಯೇ ಆತ ಬಿದ್ದಿದ್ದರಿಂದ ಗಂಭೀರ ಗಾಯಗೊಂಡು ಸಾವನ್ನಪ್ಪಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವ್ಯಕ್ತಿಯೋರ್ವನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...