alex Certify
ಕನ್ನಡ ದುನಿಯಾ       Mobile App
       

Kannada Duniya

ಮಾರಿಯಮ್ಮನ ಜಾತ್ರೆಯಲ್ಲಿ ಇಂದೆಂತಾ ಅವಘಡ

khabar

ನಾವು 21ನೇ ಶತಮಾನದಲ್ಲಿದ್ದೇವೆ. ಆದ್ರೆ ನಮ್ಮ ಸಮಾಜ ಮಾತ್ರ ಮೂಢನಂಬಿಕೆಗಳಿಂದ ಹೊರಬಂದಿಲ್ಲ. ಹಿಂದಿನಿಂದ ನಡೆದು ಬಂದ ಕೆಲ ಅಪಾಯಕಾರಿ ಸಂಪ್ರದಾಯಗಳನ್ನು ಈಗಲೂ ಮುಂದುವರೆಸಿಕೊಂಡು ಬಂದಿದ್ದೇವೆ. ಇಂತಹದೆ ಮೂಢನಂಬಿಕೆ ತಂದೆ ಹಾಗೂ ಮಗ ಸಾವು ಬದುಕಿನ ನಡುವೆ ಹೋರಾಡುವಂತೆ ಮಾಡಿದೆ.

ಜಲಂಧರ್ ನಲ್ಲಿ ನಡೆಯುತ್ತಿದ್ದ ಪ್ರಸಿದ್ಧ ಮಾರಿಯಮ್ಮನ ಜಾತ್ರೆ ಇಂದು ಮುಕ್ತಾಯಗೊಂಡಿದೆ. ಈ ಜಾತ್ರೆಯಲ್ಲಿ ಭಕ್ತರು ಕೆಂಡ ಹಾಯುತ್ತಾರೆ. ಕೆಂಡ ಹಾದು ಹರಕೆ ತೀರಿಸುವುದು ಇಲ್ಲಿ ಮೊದಲಿನಿಂದಲೂ ನಡೆದು ಬಂದ ಪದ್ಧತಿ. ಇದಕ್ಕಾಗಿ 20 ಅಡಿ ಉದ್ದದ ಹಾಗೂ ಮೂರು ಅಡಿ ಅಗಲದ ಕೆಂಡವನ್ನು ಹಾಕಲಾಗಿತ್ತು.

ಕೆಂಡ ತುಳಿದ್ರೆ ಒಳ್ಳೆಯದಾಗುತ್ತದೆ ಎಂಬ ಕಾರಣಕ್ಕೆ ತಂದೆಯೊಬ್ಬ ಮಗನನ್ನು ಎತ್ತಿಕೊಂಡು ಕೆಂಡ ಹಾಯಲು ಮುಂದಾಗಿದ್ದಾರೆ. ಕೆಂಡ ಹಾಯುವ ವೇಳೆ ತಂದೆಯ ಕಾಲು ಜಾರಿದೆ. ಇಬ್ಬರೂ ಕೆಂಡದ ಮೇಲೆ ಬಿದ್ದಿದ್ದಾರೆ. ಮಗುವಿನ ಕಿವಿ ಹಾಗೂ ಕೆಲ ಭಾಗ ಸುಟ್ಟು ಹೋಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...