alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ಪೋಟಕ ಬಳಸಿ ಸಂಸದನ ತೋಟದ ಮನೆ ಧ್ವಂಸ

ಛತ್ತೀಸ್ ಗಢದ ಕಾಂಕೆರ್ ಜಿಲ್ಲೆಯಲ್ಲಿರುವ ಬಿಜೆಪಿ ಸಂಸದರ ತೋಟದ ಮನೆಯನ್ನು ನಕ್ಸಲರು ಸ್ಪೋಟಕ ಬಳಸಿ ಧ್ವಂಸಗೊಳಿಸಿರುವ ಘಟನೆ ನಡೆದಿದೆ.

ಬಿಜೆಪಿ ಸಂಸದ ವಿಕ್ರಮ್ ಉಸೇಂದಿ ಅವರ ತೋಟದ ಮನೆಯನ್ನು ಗುರಿಯಾಗಿಸಿಕೊಂಡಿದ್ದ ನಕ್ಸಲರು, ಸುಧಾರಿತ ಸ್ಫೋಟಕ ಸಾಧನ ಬಳಸಿ ಸ್ಪೋಟಿಸಿದ್ದು, ಇದರಿಂದಾಗಿ ಮನೆಯ ಎರಡು ಕೊಠಡಿಗಳು ಧ್ವಂಸವಾಗಿವೆ.

ದಾಳಿ ಸಂದರ್ಭದಲ್ಲಿ ಈ ಮನೆಯಲ್ಲಿ ಯಾರೂ ಇರಲಿಲ್ಲವೆನ್ನಲಾಗಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಕಾಂಕೇರ್ ಜಿಲ್ಲೆಗೆ ಮುಖ್ಯಮಂತ್ರಿ ರಮಣ್ ಸಿಂಗ್ ಭೇಟಿ ನೀಡುವ ಮುನ್ನಾದಿನ ಈ ಘಟನೆ ನಡೆದಿರುವುದರಿಂದ ಪೊಲೀಸರು ತೀವ್ರ ಶೋಧ ಕಾರ್ಯ ಕೈಗೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...