alex Certify
ಕನ್ನಡ ದುನಿಯಾ       Mobile App
       

Kannada Duniya

ಚಂಡಮಾರುತದ ಅಬ್ಬರಕ್ಕೆ ಮೂರು ರಾಜ್ಯಗಳಲ್ಲಿ 35 ಬಲಿ

ಬಿರು ಬಿಸಿಲಿನ ಮಧ್ಯೆ ಸೋಮವಾರ ರಾತ್ರಿ ಸುರಿದ ಭಾರೀ ಮಳೆ ಹಾಗೂ ಚಂಡಮಾರುತ  35 ಮಂದಿಯನ್ನು ಬಲಿ ಪಡೆದಿದೆ. ಬಿಹಾರ, ಉತ್ತರ ಪ್ರದೇಶ, ಜಾರ್ಖಂಡ್ ನಲ್ಲಿ ಸೋಮವಾರ ರಾತ್ರಿ ಚಂಡಮಾರುತ ಸಮೇತ ಭಾರೀ ಮಳೆಯಾಗಿದೆ. ಘಟನೆಯಲ್ಲಿ ಅನೇಕರು ಗಾಯಗೊಂಡಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ.

ಮಾಹಿತಿ ಪ್ರಕಾರ ಚಂಡಮಾರುತಕ್ಕೆ ಬಿಹಾರದಲ್ಲಿ 17 ಮಂದಿ, ಜಾರ್ಖಂಡ್ ನಲ್ಲಿ 13 ಮಂದಿ ಹಾಗೂ ಉತ್ತರ ಪ್ರದೇಶದಲ್ಲಿ 9 ಮಂದಿ ಸಾವನ್ನಪ್ಪಿದ್ದಾರೆ. ವಿದ್ಯುತ್ ಕಂಬ, ಮರಗಳು ಮುರಿದು ಬಿದ್ದಿದ್ದು, ಸಿಡಿಲು ಬಡಿದು ಬಹುತೇಕರು ಸಾವನ್ನಪ್ಪಿದ್ದಾರೆಂದು ಮೂಲಗಳು ಹೇಳಿವೆ.

ಬಿಹಾರದಲ್ಲಿ ಚಂಡಮಾರುತದಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.ಅದ್ರಲ್ಲೂ ಔರಂಗಾಬಾದ್ ನಲ್ಲಿ ಭಾರೀ ನಷ್ಟವಾಗಿದೆ. ಉಳಿದ ಪ್ರದೇಶಗಳಲ್ಲೂ ಭಾರೀ ಚಂಡಮಾರುತ, ಮಳೆಯಾಗಿದ್ದು, ಮನೆಯ ಗೋಡೆಗಳು ಕುಸಿದು ಬಿದ್ದಿವೆ. ಮೂರು ರಾಜ್ಯಗಳ ಅನೇಕ ಜಿಲ್ಲೆಗಳಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...