alex Certify
ಕನ್ನಡ ದುನಿಯಾ       Mobile App
       

Kannada Duniya

ದೇಶ ಕಾಯುವ ಯೋಧರ ಹಣಕ್ಕೇ ಕನ್ನ..!

cards 3344ಗಡಿಯಲ್ಲಿ ನಿಂತು ದೇಶ ಕಾಯುವ ಯೋಧರ ಹಣಕ್ಕೆ ಸುರಕ್ಷತೆ ಇಲ್ಲದಂತಾಗಿದೆ. ಇವರು ಮೋಸಕ್ಕೆ ಬಲಿಯಾಗುತ್ತಿದ್ದಾರೆ. ದೆಹಲಿಯಲ್ಲಿ ಸೈನಿಕರು ‘ಸ್ಕಿಮರ್ ಗ್ಯಾಂಗ್’ ಜಾಲಕ್ಕೆ ಸಿಲುಕುತ್ತಿದ್ದಾರೆ. ಸ್ಕಿಮರ್ ಗ್ಯಾಂಗ್ ಸದಸ್ಯರು, ಯೋಧರ ಹಣವನ್ನು ಸುಲಭವಾಗಿ ದೋಚುತ್ತಿದ್ದಾರೆ.

ಏನಿದು ಸ್ಕಿಮರ್ ಗ್ಯಾಂಗ್?

ಸ್ಕಿಮರ್ ಡಿವೈಸ್ ಎಂಬ ಸಾಧನದಿಂದ ಸುಲಭವಾಗಿ ಸೈನಿಕರ ಹಣವನ್ನು ದೋಚಲಾಗುತ್ತಿದೆ. ಸ್ಕಿಮರ್ ಡಿವೈಸ್ ಒಂದು ಎಲೆಕ್ಟ್ರಾನಿಕ್ ಡಿವೈಸ್ ಆಗಿದ್ದು, ಎಟಿಎಮ್ ಒಳಗಿರುವ ಕಾರ್ಡ್ ಇನ್ಸರ್ಟ್ ಉಪಕರಣವನ್ನೇ ಹೋಲುತ್ತದೆ. ಈ ಡಿವೈಸ್ ಅನ್ನು ಕಾರ್ಡ್ ಇನ್ಸರ್ಟ್ ಉಪಕರಣದ ಮೇಲ್ಗಡೆ ಅಳವಡಿಸಲಾಗುತ್ತದೆ. ಗ್ರಾಹಕರು ಎಟಿಎಮ್ ಕಾರ್ಡ್ ಅನ್ನು ಒಳಗೆ ಹಾಕುತ್ತಿದ್ದಂತೆಯೇ ಸ್ಕಿಮರ್ ಡಿವೈಸ್ ಎಟಿಎಮ್ ಕುರಿತಾದ ಎಲ್ಲ ಮಾಹಿತಿಗಳನ್ನು ಕಲೆಹಾಕುತ್ತದೆ. ಇಷ್ಟೇ ಅಲ್ಲ ಸ್ಕಿಮರ್ ಗ್ಯಾಂಗ್, ಇದರೊಳಗೆ ಒಂದು ಗೌಪ್ಯ ಕ್ಯಾಮರಾವನ್ನು ಕೂಡ ಅಳವಡಿಸಿರುತ್ತದೆ. ಇದು ಪಾಸ್ ವರ್ಡ್ ಅನ್ನು ತಿಳಿದುಕೊಳ್ಳುತ್ತದೆ. ಎಲ್ಲ ಮಾಹಿತಿಯನ್ನು ಪಡೆದ ಗ್ಯಾಂಗ್, ಹೊಸ ಎಟಿಎಮ್ ಕಾರ್ಡ್ ತಯಾರಿಸಿ ಸುಲಭವಾಗಿ ಹಣ ತೆಗೆಯುತ್ತದೆ.

ಸೈನಿಕರೇ ಮುಖ್ಯ ಗುರಿ

ಎಲ್ಲ ಮಾಹಿತಿಗಳನ್ನು ತಿಳಿದ ನಂತರ ಸರಾಗವಾಗಿ ಸೈನಿಕರ ಖಾತೆಯಲ್ಲಿರುವ ಹಣವನ್ನು ದೋಚುವುದು ಸ್ಕಿಮರ್ ಗ್ಯಾಂಗ್ ಕೆಲಸ. ಸೈನಿಕರು ಆಗಾಗ ವರ್ಗಾವಣೆ ಹೊಂದುತ್ತಿರುವುದರಿಂದ ಮತ್ತು ಎಲ್ಲ ಸಮಯದಲ್ಲೂ ಅವರ ಫೋನ್ ವ್ಯಾಪ್ತಿ ಪ್ರದೇಶದಲ್ಲಿ ಇಲ್ಲದಿರುವ ಕಾರಣ ಅವರಿಗೆ ಖಾತೆಯ ಕುರಿತಾದ ದಾಖಲೆಗಳು ಕೂಡ ಲಭ್ಯವಾಗುವುದಿಲ್ಲ. ಹೀಗಾಗಿಯೇ ಸ್ಕಿಮರ್ ಗ್ಯಾಂಗ್, ಸೈನಿಕರನ್ನು ತಮ್ಮ ಮುಖ್ಯ ಗುರಿಯಾಗಿರಿಸಿಕೊಂಡಿದ್ದಾರೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...