alex Certify
ಕನ್ನಡ ದುನಿಯಾ       Mobile App
       

Kannada Duniya

48 ಗಂಟೆಯಲ್ಲಿ ಮುಂಗಾರು ಮಳೆ ಎಂಟ್ರಿ

monsoon keral kar

ನವದೆಹಲಿ: ಬರಗಾಲದಿಂದ ತತ್ತರಿಸಿರುವ ಜನ ಎದುರು ನೋಡುತ್ತಿರುವ ಮುಂಗಾರು ಮಳೆ ಆಗಮನಕ್ಕೆ ಇನ್ನೂ 48 ಗಂಟೆಗಳು ಉಳಿದಿವೆ. ಮುಂದಿನ 48 ಗಂಟೆಯಲ್ಲಿ ಕೇರಳಕ್ಕೆ ಮುಂಗಾರು ಮಳೆ ಪ್ರವೇಶಿಸಲಿದೆ.

ಭಾರತೀಯ ಹವಾಮಾನ ಇಲಾಖೆ ನೀಡಿರುವ ಮಾಹಿತಿಯಂತೆ ಮುಂದಿನ ಎರಡು ದಿನಗಳಲ್ಲಿ ಮುಂಗಾರು ಮಳೆ ಪ್ರವೇಶಿಸಲಿದೆ. ಈಗಾಗಲೇ ನೈರುತ್ಯ ಮುಂಗಾರು ಆಗಮನಕ್ಕೆ ಪೂರಕ ವಾತಾವರಣ ಸೃಷ್ಠಿಯಾಗಿದೆ. ಮುಂದಿನ 48 ಗಂಟೆಗಳಲ್ಲಿ ಮಳೆ ಕೇರಳದ ಕರಾವಳಿ ಜಿಲ್ಲೆಗಳಿಗೆ ಪ್ರವೇಶಿಸಲಿದೆ ಎಂದು ಹೇಳಲಾಗಿದೆ. ಜೂನ್ 9 ರಂದು ಧಾರಾಕಾರ ಮಳೆಯಾಗಬಹುದೆಂದು ಹವಾಮಾನ ಇಲಾಖೆ ತಿಳಿಸಿದೆ.

ಕೇರಳ ಕರಾವಳಿ ತೀರಕ್ಕೆ 48 ಗಂಟೆಯೊಳಗೆ ಪ್ರವೇಶಿಸಲಿರುವ ಮುಂಗಾರು, ನಂತರದಲ್ಲಿ ಕರ್ನಾಟಕ ಪ್ರವೇಶಿಸಲಿದೆ. ಜೂನ್ 10 ರವರೆಗೆ ಕೇರಳದ ಕೆಲವು ಭಾಗಗಳಲ್ಲಿ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಮುಂಗಾರು ಪೂರ್ವ ಮಳೆ ಈಗಾಗಲೇ ಇಳಿಮುಖವಾಗಿದ್ದು, ಮುಂಗಾರು ಆಗಮನಕ್ಕೆ ಕ್ಷಣಗಣನೆ ಆರಂಭವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...