alex Certify
ಕನ್ನಡ ದುನಿಯಾ       Mobile App
       

Kannada Duniya

ಉತ್ತರ ಪ್ರದೇಶಕ್ಕೆ ಯಾರಾಗ್ತಾರೆ ಸಿ.ಎಂ…?

up-cm-manoj

ನವದೆಹಲಿ: ಉತ್ತರಾಖಂಡ್ ನಲ್ಲಿ ಆರ್.ಎಸ್.ಎಸ್. ಮಾಜಿ ಪ್ರಚಾರಕ ತ್ರಿವೇಂದ್ರ ಸಿಂಗ್ ರಾವತ್ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ.

ಇದೇ ವೇಳೆ ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿಯಾಗಿ ಯಾರನ್ನು ಆಯ್ಕೆ ಮಾಡಬೇಕೆಂಬ ಚಿಂತನೆಯಲ್ಲಿ ಬಿ.ಜೆ.ಪಿ. ವರಿಷ್ಠರಿದ್ದಾರೆ.

ಕೇಂದ್ರ ಸಚಿವ ರಾಜನಾಥ್ ಸಿಂಗ್, ಉತ್ತರ ಪ್ರದೇಶ ಬಿ.ಜೆ.ಪಿ. ಅಧ್ಯಕ್ಷ ಕೇಶವ್ ಪ್ರಸಾದ್ ಮೌರ್ಯ, ಕಲ್ ರಾಜ್ ಮಿಶ್ರಾ, ದಿನೇಶ್ ಶರ್ಮ, ಸಂಸದ ಯೋಗಿ ಆದಿತ್ಯ ನಾಥ್ ಮೊದಲಾದವರ ಹೆಸರು ಕೇಳಿ ಬರುತ್ತಿವೆ.

ಆದರೆ, ರೇಸ್ ನಲ್ಲಿ ಇಲ್ಲದ ಕೇಂದ್ರ ಸಚಿವ ಮನೋಜ್ ಸಿನ್ಹಾ ಮುಖ್ಯಮಂತ್ರಿಯಾಗುವುದು ನಿಶ್ಚಿತವಾಗಿದೆ. ಶಾಸಕಾಂಗ ಸಭೆ ಇಂದು ನಡೆಯಲಿದ್ದು, ಬಿ.ಜೆ.ಪಿ. ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನೇತೃತ್ವ ವಹಿಸಲಿದ್ದಾರೆ.

ಸಭೆಯಲ್ಲಿ ಮನೋಜ್ ಸಿನ್ಹಾ ಅವರ ಹೆಸರನ್ನು ಅಧಿಕೃತವಾಗಿ ಪ್ರಕಟಿಸಲಾಗುತ್ತದೆ. ನಾಳೆ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...