alex Certify
ಕನ್ನಡ ದುನಿಯಾ       Mobile App
       

Kannada Duniya

ಕಠಿಣ ಸವಾಲಿಗೆ ಇಸ್ರೋ ಸಿದ್ಧ: ಕೆ. ಶಿವನ್

ಇದೇ ಮೊದಲ ಬಾರಿಗೆ ಬಾಹ್ಯಾಕಾಶಕ್ಕೆ ಮಾನವ ಸಹಿತ ಉಪಗ್ರಹವನ್ನು ರವಾನೆ ಮಾಡಲು ಪ್ಲಾನ್ ಮಾಡಿಕೊಳ್ಳಲಾಗುತ್ತಿದೆ. ಇಸ್ರೋ ಈ ಬಗ್ಗೆ ಮಾಹಿತಿ ನೀಡಿದ್ದು, ಈ ಯೋಜನೆ 10 ಸಾವಿರ ಕೋಟಿಗಿಂತಲೂ ಕಡಿಮೆ ವೆಚ್ಚದಲ್ಲಿ ಪೂರ್ಣಗೊಳ್ಳಬಹುದೆಂದು ಅಂದಾಜಿಸಲಾಗಿದೆ.

2022 ರ ಹೊತ್ತಿಗೆ ಬಾಹ್ಯಾಕಾಶಕ್ಕೆ ಭಾರತೀಯರ ರವಾನೆ ಮಾಡುವ ಮೂಲಕ ಅಂತರಿಕ್ಷದಲ್ಲಿ ಭಾರತದ ಧ್ವಜ ಹಾರಾಡುವಂತೆ ಮಾಡುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಸ್ವಾತಂತ್ರ್ಯ ದಿನಾಚರಣೆಯ ತಮ್ಮ ಭಾಷಣದಲ್ಲಿ ಹೇಳಿದ್ದಾರೆ.

ಈ ದೊಡ್ಡ ಸವಾಲನ್ನು ನಾವು ಎದುರಿಸಲು ಸಿದ್ಧರಾಗಿರೋದಾಗಿ ಇಸ್ರೋ ಅಧ್ಯಕ್ಷ ಕೆ.ಶಿವನ್ ತಿಳಿಸಿದ್ದಾರೆ. ಅಲ್ಲದೆ ನಿಗದಿಪಡಿಸಿದ ಅವಧಿಯ ಒಳಗಡೆ ಕಾರ್ಯ ಮುಗಿಸುವ ವಿಶ್ವಾಸ ಇದೆ. ಈ ಯೋಜನೆಯಲ್ಲಿ ತುಂಬ ಕೆಲಸ ಇದೆ. ಇದಕ್ಕೆ ಬೇಕಾದ ಕಾರ್ಯಗಳನ್ನು ಈಗಿನಿಂದಲೇ ಆರಂಭಿಸಿದ್ದೇವೆ. ಅಂತರಿಕ್ಷದಲ್ಲಿ ಮಾನವ ಕನಿಷ್ಠ ಏಳು ದಿನ ಇರಲು ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

ಅಂತರಿಕ್ಷ ಯಾನಿಗಳಿಗೆ ಬೇಕಾದ ಜೀವರಕ್ಷಕ ಸ್ಯೂಟ್ ಅನ್ನ ನಾವೇ ಅಭಿವೃದ್ಧಿ ಪಡಿಸಿದ್ದೇವೆ. 2022ರ ಒಳಗೆ ಮಾನವ ಸಹಿತ ಅಂತರಿಕ್ಷ ಯಾತ್ರೆ ಮಾಡುವ ದೇಶವಾಗಿ ಭಾರತ ಹೊರಹೊಮ್ಮಲಿದೆ ಎಂದು ಶಿವನ್ ತಿಳಿಸಿದ್ದಾರೆ. ಮಾನವ ಸಹಿತ ಬಾಹ್ಯಾಕಾಶ ನೌಕೆಗೆ ಹೆಚ್ಚಿನ ಹಣವನ್ನು ಖರ್ಚು ಮಾಡದೆ ಕಡಿಮೆ ಹಣದಲ್ಲಿ ಯೋಜನೆಯನ್ನು ಮುಗಿಸುವ ಗುರಿ ಇಸ್ರೋ ತಂಡದ್ದಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...