alex Certify
ಕನ್ನಡ ದುನಿಯಾ       Mobile App
       

Kannada Duniya

ವಿವಾದಕ್ಕೆ ಕಾರಣವಾಯ್ತು ಆಪ್ ಸಂಸದನ ವಿಡಿಯೋ

mann_mpಪಂಜಾಬ್ ನ ಸಂಗ್ರೂರ್ ಲೋಕಸಭಾ ಸದಸ್ಯ ಭಗವಂತ್ ಮಾನ್ ಹಲವು ಬಾರಿ ವಿವಾದಕ್ಕೊಳಗಾಗಿದ್ದಾರೆ. ಅವರು ಮದ್ಯಪಾನ ಮಾಡಿಕೊಂಡೇ ಸಂಸತ್ ಗೆ ತೆರಳುತ್ತಾರೆಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದು, ಈಗ ಮಾನ್ ಅವರ ವಿಡಿಯೋ ಒಂದು ವಿವಾದಕ್ಕೆ ಕಾರಣವಾಗಿದೆ.

11 ನಿಮಿಷ 52 ಸೆಕೆಂಡ್ ನ ಈ ವಿಡಿಯೋ ವನ್ನು ಭಗವಂತ್ ಮಾನ್ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಹಾಕಿದ್ದು, ಇದರಲ್ಲಿ ಅವರು ಮನೆಯಿಂದ ಸಂಸತ್ ವರೆಗೂ ಕಾರಿನಲ್ಲಿ ಹೋಗುವ ಹಾಗೂ ಸಂಸತ್ ನ ಶೂನ್ಯ ವೇಳೆಯಲ್ಲಿ ಕೇಳುವ ಪ್ರಶ್ನೆಯ ವಿವರ ದಾಖಲಿಸಿದ್ದಾರೆ.

ಈ ವಿಡಿಯೋ ಈಗ ವಿವಾದಕ್ಕೆ ಕಾರಣವಾಗಿದ್ದು, ಸಂಸತ್ ಮೇಲೆ ಈ ಹಿಂದೆ ಒಮ್ಮೆ ಭಯೋತ್ಪಾದಕರ ದಾಳಿ ನಡೆದಿರುವ ಮಧ್ಯೆ, ಭಗವಂತ್ ಮಾನ್ ಸಂಸತ್ ನ ಭದ್ರತಾ ವ್ಯವಸ್ಥೆಯ ದೃಶ್ಯಾವಳಿಗಳನ್ನು ಬಹಿರಂಗಪಡಿಸಿರುವುದು ಟೀಕೆಗೆ ಗುರಿಯಾಗಿದೆ.

ಈ ಮಧ್ಯೆ ಲೋಕಸಭಾ ಸ್ಪೀಕರ್, ಭದ್ರತಾ ವೈಫಲ್ಯದ ಬಗ್ಗೆ ತನಿಖೆ ನಡೆಸಲು ಆದೇಶಿಸಿರುವುದಲ್ಲದೇ ಭಗವಂತ್ ಮಾನ್ ಅವರಿಂದಲೂ ವಿವರಣೆ ಪಡೆಯುವ ಸಾಧ್ಯತೆ ಇದೆ. ಆಕಾಲಿ ದಳ ಭಗವಂತ್ ಮಾನ್ ವಿರುದ್ದ ಹಕ್ಕುಚ್ಯುತಿ ಮಂಡಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...