alex Certify
ಕನ್ನಡ ದುನಿಯಾ       Mobile App
       

Kannada Duniya

‘ಮನ್ ಕಿ ಬಾತ್’ನಲ್ಲಿ ದರ್ಶನ್, ಸೀತವ್ವ ಸ್ಮರಿಸಿದ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು ‘ಮನ್ ಕಿ ಬಾತ್’ ಸರಣಿಯ 40 ನೇ ಆವೃತ್ತಿಯಲ್ಲಿ ಮಾತನಾಡಿದ್ದಾರೆ.

ಗಗನಯಾತ್ರಿ ಕಲ್ಪನಾ ಚಾವ್ಲಾ ಅವರನ್ನು ಸ್ಮರಿಸಿದ ಮೋದಿ, ಮಹಿಳೆಯರು ಎಲ್ಲಾ ವಲಯದಲ್ಲಿಯೂ ಸಾಧನೆ ಮಾಡಿದ್ದಾರೆ. ಕುಟುಂಬ ಮತ್ತು ದೇಶದ ಅಭಿವೃದ್ಧಿಯಲ್ಲಿ ಮಹಿಳೆಯರು ಪ್ರಮುಖವಾದ ಪಾತ್ರವನ್ನು ವಹಿಸಿದ್ದಾರೆ. ಒಬ್ಬ ಹೆಣ್ಣು ಮಗಳು 10 ಮಂದಿ ಗಂಡು ಮಕ್ಕಳಿಗೆ ಸಮ ಎಂದು ಹೇಳಲಾಗುತ್ತದೆ. ಮಹಿಳೆಯರ ಸಾಧನೆಯನ್ನು ಗಮನಿಸಿದಾಗ ಅದು ನಿಜ ಎನಿಸುತ್ತದೆ ಎಂದು ಮೋದಿ ಹೇಳಿದ್ದಾರೆ.

ಪದ್ಮಶ್ರೀ ಪ್ರಶಸ್ತಿಗಳನ್ನು ಪಾರದರ್ಶಕವಾಗಿ ಜನಸಾಮಾನ್ಯರಿಗೂ ನೀಡಲಾಗಿದೆ. ಕರ್ನಾಟಕದ ಸೀತವ್ವ ಜೋಡಟ್ಟಿ ಅವರು ಮಹಿಳೆಯರ ಕಲ್ಯಾಣಕ್ಕೆ ಕೈಗೊಂಡಿರುವ ಕಾರ್ಯಗಳು ಪ್ರೇರಣೆಯಾಗಿವೆ ಎಂದು ತಿಳಿಸಿದ್ದಾರೆ.

ಇನ್ನು ಮೈಸೂರಿನ ದರ್ಶನ್ ಬಗ್ಗೆ ಪ್ರಸ್ತಾಪಿಸಿದ ಮೋದಿ, ತನ್ನ ತಂದೆಯ ಚಿಕಿತ್ಸೆ ವೆಚ್ಚಕ್ಕೆ ಪ್ರತಿ ತಿಂಗಳು 6000 ರೂ. ವೆಚ್ಚ ಮಾಡುತ್ತಿದ್ದ ದರ್ಶನ್, ನಂತರದಲ್ಲಿ ಪ್ರಧಾನ್ ಮಂತ್ರಿ ಜನ್ ಔಷಧಿ ಯೋಜನೆಯ ಸದುಪಯೋಗ ಪಡೆದುಕೊಂಡರು. ಅವರಿಗೆ ಚಿಕಿತ್ಸೆ ವೆಚ್ಚದಲ್ಲಿ ಶೇ. 75 ರಷ್ಟು ಹಣ ಉಳಿತಾಯವಾಗಿದೆ. ಇದನ್ನು ಅವರೇ ಪತ್ರ ಬರೆದು ತಿಳಿಸಿದ್ದಾರೆ. ಅದೇ ರೀತಿ ಈ ಯೋಜನೆಯ ಪ್ರಯೋಜನವನ್ನು ಹೆಚ್ಚಿನ ಜನರು ಪಡೆಯುವಂತಾಗಬೇಕೆಂದು ಅಭಿಪ್ರಾಯಪಟ್ಟಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...