alex Certify
ಕನ್ನಡ ದುನಿಯಾ       Mobile App
       

Kannada Duniya

‘ಮಣಿಶಂಕರ್ ಅಯ್ಯರ್ ಗೆ ಸುಪಾರಿ ನೀಡಿದ ಪಾಕ್’

ಬನಸ್ಕಾಂತ(ಗುಜರಾತ್): ನೀಚ್ ಆದ್ಮಿ ಹೇಳಿಕೆ ನೀಡಿ ಕಾಂಗ್ರೆಸ್ ನಿಂದ ಸಸ್ಪೆಂಡ್ ಆಗಿರುವ ಮಣಿಶಂಕರ್ ಅಯ್ಯರ್ ಅವರ ಕುರಿತು ಪ್ರಧಾನಿ ನರೇಂದ್ರ ಮೋದಿ ಮತ್ತೆ ಮಾತನಾಡಿದ್ದಾರೆ.

ಗುಜರಾತ್ ನ ಬನಸ್ಕಾಂತದಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿದ ಅವರು, ಪಾಕಿಸ್ತಾನದಿಂದ ಮಣಿಶಂಕರ್ ಅಯ್ಯರ್ ಗೆ ಸುಪಾರಿ ನೀಡಲಾಗಿದೆ. ತಮ್ಮನ್ನು ಪ್ರಧಾನಿ ಹುದ್ದೆಯಿಂದ ಕೆಳಗಿಳಿಸಲು ಸುಪಾರಿ ನೀಡಲಾಗಿದೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.

ಮೋದಿಯನ್ನು ಕೆಳಗಿಳಿಸಿದರೆ, ಭಾರತ –ಪಾಕಿಸ್ತಾನದ ಸಂಬಂಧ ಏನಾಗುತ್ತದೆ. ಶಾಂತಿಗೆ ಯಾವ ರೀತಿ ಭಂಗವಾಗುತ್ತದೆ ಎಂಬುದರ ಮೇಲೆ ಅಯ್ಯರ್ ಗೆ ಸುಪಾರಿ ಕೊಡಲಾಗಿದೆ. ಆದರೆ, ನನಗೆ ಮಾ ಅಂಬೆಯ(ದೇವತೆ) ರಕ್ಷಣೆ ಇದೆ. ಜನರ ಆಶೀರ್ವಾದವಿದೆ ಎಂದು ಹೇಳಿದ್ದಾರೆ.

ಪ್ರಧಾನಿ ಮೋದಿಯವರನ್ನು ಟೀಕಿಸುವ ಭರಾಟೆಯಲ್ಲಿ ಮಣಿಶಂಕರ್ ಅಯ್ಯರ್ ನೀಚ್ ಆದ್ಮಿ ಎಂದಿದ್ದರು. ಇದಕ್ಕೆ ಪ್ರಧಾನಿ ಕೂಡ ತಿರುಗೇಟು ನೀಡಿದ್ದರು. ಇಂದು ಬನಸ್ಕಾಂತದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮತ್ತೆ ಅಯ್ಯರ್ ವಿಷಯ ಪ್ರಸ್ತಾಪಿಸಿದ ಮೋದಿ ಅವರು ಪಾಕಿಸ್ತಾನದಿಂದ ಸುಪಾರಿ ಪಡೆದಿದ್ದಾರೆ ಎಂದು ಆರೋಪಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...