alex Certify
ಕನ್ನಡ ದುನಿಯಾ       Mobile App
       

Kannada Duniya

ಗಂಡು ಮಗು ಆಸೆಯಲ್ಲಿದ್ದ ದಂಪತಿ ಮಗಳಿಗೆ ಇಟ್ರು ಇಂಥ ಹೆಸರು..!

ಗಂಡು ಮಗು ಬಯಸುವವರ ಸಂಖ್ಯೆ ಕಡಿಮೆಯಾಗಿಲ್ಲ. ಗಂಡು ಮಗುವಿಗಾಗಿ ಹರಕೆ ಹೊರುವವರ ಸಂಖ್ಯೆ ಈಗ್ಲೂ ಇದೆ. ಆದ್ರೆ ಈ ಕುಟುಂಬಸ್ಥರು ಗಂಡು ಮಗು ಜನಿಸಲಿಲ್ಲ ಎನ್ನುವ ಕಾರಣಕ್ಕೆ ಹುಟ್ಟಿದ ಹೆಣ್ಣು ಮಗುವಿಗೆ ವಿಚಿತ್ರ ಹೆಸರನ್ನು ಇಟ್ಟಿದ್ದಾರೆ. ಮಗು ಹೆಸರು ಕೇಳಿ ಎಲ್ಲರೂ ಆಶ್ಚರ್ಯಕ್ಕೊಳಗಾಗ್ತಾರೆ.

ಮಧ್ಯಪ್ರದೇಶದಲ್ಲಿ ಮಂದಸೌರ್ ಜಿಲ್ಲೆ ಮುಖ್ಯ ಕಚೇರಿಯಿಂದ ಸುಮಾರು 35 ಕಿ.ಮೀ ದೂರದಲ್ಲಿರುವ ಬಿಲೌದ್ ಗ್ರಾಮದಲ್ಲಿ ಎರಡು ಕುಟುಂಬದ ಜನರು ಹೆಣ್ಣು ಮಕ್ಕಳಿಗೆ ಅನ್ ಚಾಹಿ (ಅನಗತ್ಯ) ಎಂದು ಹೆಸರಿಟ್ಟಿದ್ದಾರೆ. ಜನನ ದಾಖಲೆ ಹಾಗೂ ಶಾಲಾ ದಾಖಲಾತಿಯಲ್ಲಿರುವ ಹೆಣ್ಣು ಮಕ್ಕಳ ಹೆಸರು ನೋಡಿ ಜನರು ಆಶ್ಚರ್ಯಕ್ಕೊಳಗಾಗಿದ್ದಾರೆ.

ಗಂಡು ಮಗು ಆಸೆಗೆ ದಂಪತಿ 5 ಮಗುವನ್ನು ಹೆತ್ತಿದ್ದಾರೆ. ಐದನೇಯದೂ ಹೆಣ್ಣಾಗಿದ್ದರಿಂದ ಮಗುವಿಗೆ ಅನ್ ಚಾಹಿ ಎಂದು ಹೆಸರಿಟ್ಟಿದ್ದಾರೆ. ಆರನೇ ಮಗು ಗಂಡಾಗ್ಲಿ ಎನ್ನುವ ಕಾರಣಕ್ಕೆ ಹೀಗೆ ಮಾಡಿದ್ದರಂತೆ. ಆದ್ರೆ 6ನೇಯದೂ ಹೆಣ್ಣಾಗಿದ್ದರಿಂದ ಗಂಡಿನ ಆಸೆ ಬಿಟ್ಟರಂತೆ.

ಅನ್ ಚಾಹಿ ಈಗ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯುತ್ತಿದ್ದಾಳೆ. ಆದಷ್ಟು ಬೇಗ ಹೆಸರು ಬದಲಾಯಿಸಿಕೊಳ್ಳುವ ಯೋಜನೆಯಿದೆ. ಮೊದಲು ಅದ್ರ ಅರ್ಥ ತಿಳಿಯುತ್ತಿರಲಿಲ್ಲ. ಈಗ ಬೇಸರವಾಗುತ್ತದೆ ಎಂದು ಅನ್ ಚಾಹಿ ಹೇಳಿದ್ದಾಳೆ.

ಮಧ್ಯಪ್ರದೇಶದ ಸಿಎಂ ಶಿವರಾಜ್ ಸಿಂಗ್ ಹೆಣ್ಣು ಮಕ್ಕಳ ರಕ್ಷಣೆಗಾಗಿ ಲಾಡ್ಲಿ ಲಕ್ಷ್ಮಿ ಯೋಜನೆ ಶುರು ಮಾಡಿದ್ದಾರೆ. ದೇಶದಾದ್ಯಂತ ಹೆಣ್ಣು ಮಕ್ಕಳ ರಕ್ಷಣೆಗೆ ಅನೇಕ ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಿವೆ. ಈ ನಡುವೆಯೂ ಇಂಥ ಘಟನೆಗಳು ನಡೆಯುತ್ತಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...